Hindusthan Samachar
Banner 2 बुधवार, फरवरी 20, 2019 | समय 19:23 Hrs(IST) Sonali Sonali Sonali Singh Bisht

ನಾಳೆಯ ರಾಜಕೀಯ ಬೆಳವಣಿಗೆ ಬಗ್ಗೆ ನಾನು ಉತ್ಸುಕನಾಗಿದ್ದೇನೆ - ಹೆಚ್ ಡಿ ದೇವೇಗೌಡ

By HindusthanSamachar | Publish Date: May 18 2018 3:39PM
ನಾಳೆಯ ರಾಜಕೀಯ ಬೆಳವಣಿಗೆ ಬಗ್ಗೆ ನಾನು ಉತ್ಸುಕನಾಗಿದ್ದೇನೆ - ಹೆಚ್ ಡಿ ದೇವೇಗೌಡ
ಬೆಂಗಳೂರು, ಮೇ.18 (ಹಿ ಸ) - ನಾಳೆಯ ಬಹುಮತ ಸಾಬೀತು ಪ್ರಕ್ರಿಯೆ ಬಗ್ಗೆ ನಾನೂ ಉತ್ಸುಕನಾಗಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಹೇಳಿದ್ದಾರೆ. ತಿರುಪತಿ ತಿಮ್ಮಪ್ಪನ ದರ್ಶನದ ಬಳಿಕ ಬೆಂಗಳೂರಿಗೆ ಆಗಮಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ನಾಳೆಯ ಬೆಳವಣಿಗೆ ಏನಾಗುತ್ತದೆಯೋ ಅನ್ನುವುದರ ಮೇಲೆ, ನಮ್ಮ ಪಕ್ಷದ ನಿಲುವು ನಿರ್ಧಾರ ಅವಲಂಬಿತವಾಗಿದೆ . ನಾವು ಇತಿಹಾಸದಲ್ಲಿ ಈವರೆಗೂ ಪೂರ್ಣ ಬಹುಮತದಿಂದ ಸರ್ಕಾರ ರಚಿಸಿಯೇ ಇಲ್ಲ. ಈ ಬಗ್ಗೆ ಬೇಸರವಿದೆ ಎಂದೂ ದೇವೇಗೌಡರು ಬೇಸರವನ್ನು ವ್ಯಕ್ತಪಡಿಸಿದರು. ನನ್ನ ಮಗ ಮುಖ್ಯಮಂತ್ರಿ ಆದರೆ ನನಗೆ ಸಂತೋಷವೂ ಆಗುವುದಿಲ್ಲ..ದುಃಖವೂ ಆಗುವುದಿಲ್ಲ..ನಾನು ಸ್ಥಿತಪ್ರಜ್ನನಾಗಿರುತ್ತೇನೆಎಂದು ದೇವೇಗೌಡರು ಮಾರ್ಮಿಕವಾಗಿ ಹೇಳಿದ್ದಾರೆ. ಈ ನಡುವೆ, ತಿರುಪತಿಯಿಂದ ತಮ್ಮ ನಿವಾಸಕ್ಕೆ ಆಗಮಿಸಿದ್ದು, ದೊಡ್ಡ ಗೌಡರಿಗೆ ಹುಟ್ಟುಹಬ್ಬದ ಶುಭಕೋರಲು ಗೌಡರ ಕುಟುಂಬ ಸದಸ್ಯರು ಹಾಗು ಕಾರ್ಯಕರ್ತರು ಪದ್ಮನಾಭ ನಗರದ ಮನೆಗೆ ಆಗಮಿಸುತ್ತಿದ್ದಾರೆ. ಹಿಂದುಸ್ತಾನ ಸಮಾಚಾರ/ಆರ್.ಎಸ್/ಯ.ಮ
लोकप्रिय खबरें
चुनाव 2018
image