Hindusthan Samachar
Banner 2 बुधवार, सितम्बर 26, 2018 | समय 08:57 Hrs(IST) Sonali Sonali Sonali Singh Bisht

ಸದನದಲ್ಲಿ ನಾವು ಯಶಸ್ವಿಯಾಗುತ್ತೇವೆ – ಮಾಜಿ ಸಚಿವ ಮುರುಗೇಶ್ ನಿರಾಣಿ

By HindusthanSamachar | Publish Date: May 18 2018 3:40PM
ಸದನದಲ್ಲಿ ನಾವು ಯಶಸ್ವಿಯಾಗುತ್ತೇವೆ – ಮಾಜಿ ಸಚಿವ ಮುರುಗೇಶ್ ನಿರಾಣಿ
ಬೆಂಗಳೂರು, ಮೇ.18 (ಹಿ ಸ) - ನಾಳೆ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಬಿಜೆಪಿಗೆ ಹಿನ್ನಡೆಯಲ್ಲ. ನಾವು ಕಾಲಮಿತಿಗೂ ಮುನ್ನವೇ ಬಹುಮತ ಸಾಬೀತುಪಡಿಸಲು ಮಾನಸಿಕವಾಗಿ ಸಿದ್ಧವಾಗಿದ್ದೇವೆ. ಅದರಂತೆ ನಾಳೆ ಬಹುಮತ ಸಾಬೀತುಪಡಿಸುತ್ತೇವೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ನಮಗೆ 15 ದಿನ ಕಾಲಾವಕಾಶ ನೀಡಿದ್ದರು. ಆದರೆ ನಾವು ಅದಕ್ಕೂ ಮೊದಲೇ ಬಹುಮತ ಸಾಬೀತುಪಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವು.. ಈಗ ಸುಪ್ರೀಂ ಕೋರ್ಟ್ ನಾಳೆಯೇ ಬಹುಮತ ತೋರಿಸಿ ಎಂದು ಹೇಳಿದೆ. ಈ ಆದೇಶಕ್ಕೆ ನಾವು ಬದ್ಧವಾಗಿದ್ದೇವೆ ಎಂದರು. ನಮಗೆ ಬಹುಮತಕ್ಕೆ ಅಗತ್ಯವಾದ ಸದಸ್ಯರ ಬೆಂಬಲವಿದೆ. ನಾಳೆ ಸಂಜೆ ನಾಲ್ಕು ಗಂಟೆಗೆ ನಾವು 113 ಸಂಖ್ಯೆಯನ್ನು ಸದನದಲ್ಲಿ ತೋರಿಸುವಲ್ಲಿ ಯಶಸ್ವಿಯಾಗಲಿದ್ದೇವೆ. ಇತರ ಪಕ್ಷಗಳ ಎಷ್ಟು ಸದಸ್ಯರು ನಮ್ಮನ್ನು ಬೆಂಬಲಿಸುತ್ತಾರೆ ಎನ್ನುವ ವಿವರ ನೀಡಲು ಸಾಧ್ಯವಿಲ್ಲ, ನಾಳೆ ಕಾದು ನೋಡಿ ಎಂದು ತಿಳಿಸಿದರು. ಹಿಂದುಸ್ತಾನ ಸಮಾಚಾರ/ಆರ್.ಎಸ್/ಯ.ಮ
image