Hindusthan Samachar
Banner 2 सोमवार, मई 21, 2018 | समय 04:44 Hrs(IST) Sonali Sonali Sonali Singh Bisht

ಕಾವೇರಿ ನೀರು ಹಂಚಿಕೆ - ಕೇಂದ್ರದ ಯೋಜನೆ ಜಾರಿಗೆ ಸುಪ್ರೀಂ ಅಸ್ತು

By HindusthanSamachar | Publish Date: May 18 2018 3:08PM
ನವದೆಹಲಿ, ಮೇ.18 (ಹಿ ಸ) - ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ಪರಿಷ್ಕೃತ ಯೋಜನೆಯನ್ನು (ಸ್ಕೀಂ) ಮುಂಗಾರು ಹಂಗಾಮಿಗೆ ಮೊದಲೇ ಜಾರಿ ಮಾಡುವಂತೆ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ. ನಾಲ್ಕು ರಾಜ್ಯಗಳ ನಡುವೆ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ರೂಪಿಸಿರುವ ಪರಿಷ್ಕೃತ ಯೋಜನೆಯನ್ನು (ಸ್ಕೀಂ) ಮುಂಗಾರು ಹಂಗಾಮಿಗೆ ಮೊದಲೇ ಜಾರಿ ಮಾಡಲು ತೀರ್ಪು ಸೂಚಿಸಿದೆ. ಮುಂಗಾರಿಗೆ ಮೊದಲೇ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕಾರ್ಯಾರಂಭ ಮಾಡಬೇಕು ಎಂದು ಸೂಚಿಸಿರುವ ನ್ಯಾಯಾಲಯವು, ಮಂಡಳಿ ಮಾದರಿಯ ಪ್ರಾಧಿಕಾರ ಬೇಡ ಎಂದು ರಾಜ್ಯ ಸಲ್ಲಿಸಿದ್ದ ಆಕ್ಷೇಪಣೆಯನ್ನು ತಳ್ಳಿಹಾಕಿತು. ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ಮಧ್ಯಾಹ್ನ 2 ಗಂಟೆಗೆ ತೀರ್ಪು ಓದಿದರು. ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಈ ತೀರ್ಪು ನೀಡಿದೆ. ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಾಧಿಕಾರಕ್ಕೆ ಸಂಪೂರ್ಣ ಅಧಿಕಾರ ಇರಬೇಕು ಎಂಬ ಪುದುಚೇರಿಯ ಬೇಡಿಕೆಯನ್ನು ಕೋರ್ಟ್ ಪುರಸ್ಕರಿಸಿದೆ. ಜಲಾಶಯಗಳು ಆಯಾ ರಾಜ್ಯಗಳ ಸುಪರ್ದಿಯಲ್ಲಿಯೇ ಇರಲಿವೆ. ಕೇಂದ್ರ ಸರ್ಕಾರ ರೂಪಿಸಿರುವ... For More details Please login to Hindusthan Samachar
image