By HindusthanSamachar | Publish Date: May 18 2018 2:30PMಬೆಂಗಳೂರು, ಮೇ.18 (ಹಿ ಸ) - ಇಂದು ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿನಿಂದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗು ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಹಿನ್ನಡೆಯಾಗಿದೆ ಎಂದು ಶಾಸಕ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ನಾವು ಸುಪ್ರಿಂ ತೀರ್ಪನ್ನು ಸ್ವಾಗತಿಸುತ್ತೇವೆ. 104 ಶಾಸಕರ ಬಲ ಹೊಂದಿರುವ ನಾವು ಸರ್ಕಾರ ರಚಿಸುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ. ಅವರು ತಮ್ಮ ಸ್ಥಾನಕ್ಕೆ ತಕ್ಕಂತೆ ಮಾತನಾಡಬೇಕು. ಮುಂದೇನಾಗುವುದೋ ಕಾದು ನೋಡಿ ಎಂದು ಹೇಳಿದರು.
ಹಿಂದುಸ್ತಾನ ಸಮಾಚಾರ/ಆರ್.ಎಸ್/ಯ.ಮ