Hindusthan Samachar
Banner 2 रविवार, सितम्बर 23, 2018 | समय 06:12 Hrs(IST) Sonali Sonali Sonali Singh Bisht

ಭಾರಿ ಮಳೆ – ಜಲಾವೃತವಾದ ಸವದತ್ತಿ ಯಲ್ಲಮ್ಮನ ದೇವಸ್ಥಾನ

By HindusthanSamachar | Publish Date: May 18 2018 2:31PM
ಭಾರಿ ಮಳೆ – ಜಲಾವೃತವಾದ ಸವದತ್ತಿ ಯಲ್ಲಮ್ಮನ ದೇವಸ್ಥಾನ
ಬೆಳಗಾವಿ, ಮೇ.18 (ಹಿ ಸ) - ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಸವದತ್ತಿ ಯಲ್ಲಮ್ಮ ದೇವಸ್ಥಾನದ ಆವರಣಕ್ಕೆ ಮಳೆ ನೀರು ನುಗ್ಗಿದೆ. ಮಳೆ ನೀರು ನುಗ್ಗಿದ ಪರಿಣಾಮ ಯಲ್ಲಮ್ಮನ ದರ್ಶನಕ್ಕೆ ಬಂದ ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ. ಸತತ 4 ಗಂಟೆ ಸುರಿದ ಮಳೆಯಿಂದ ದೇವಸ್ಥಾನ ಆವರಣದೊಳಗೆ ನೀರು ನುಗ್ಗಿದೆ. ಮಳೆ ನೀರು ನುಗ್ಗಿದ್ದರಿಂದ ದೇವಸ್ಥಾನದ ಆವರಣದಲ್ಲಿ ಇರುವ ಅಂಗಡಿ ಮಾಲೀಕರಿಗೆ ಹಾನಿಯಾಗಿದೆ. ಹಿಂದುಸ್ತಾನ ಸಮಾಚಾರ/ಆರ್.ಎಸ್/ಯ.ಮ
image