Hindusthan Samachar
Banner 2 शुक्रवार, जुलाई 20, 2018 | समय 11:58 Hrs(IST) Sonali Sonali Sonali Singh Bisht

ಹೆಚ್.ಡಿ ದೇವೇಗೌಡ ಹುಟ್ಟುಹಬ್ಬ - ಪ್ರಧಾನಿ ಮೋದಿ, ರಾಹುಲ್ ಶುಭಾಶಯ

By HindusthanSamachar | Publish Date: May 18 2018 2:28PM
ಹೆಚ್.ಡಿ ದೇವೇಗೌಡ ಹುಟ್ಟುಹಬ್ಬ - ಪ್ರಧಾನಿ  ಮೋದಿ, ರಾಹುಲ್ ಶುಭಾಶಯ
ಬೆಂಗಳೂರು, ಮೇ.18 (ಹಿ ಸ) – ಇಚಿದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಹುಟುಹಬ್ಬದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಭಾಶಯ ಕೋರಿದ್ದಾರೆ. ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿ, ನಮ್ಮ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ಮಾತನಾಡಿಸಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದೇನೆ. ಅವರಿಗೆ ದೇವರು ದೀರ್ಘಾಯುಷ್ಯ ಮತ್ತು ಒಳ್ಳೆಯ ಆರೋಗ್ಯ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ದೇವೇಗೌಡ ಅವರು 1996 ರ ಜೂನ್ 1 ರಿಂದ 1997 ಎಪ್ರಿಲ್ 21 ರ ವರೆಗೆ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಇಂದು 85 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ವೇಳೆ ದೇವೇಗೌಡರನ್ನು ಅಭಿನಂದಿಸಿ ಹುಟ್ಟುಹಬ್ಬದ ಶುಭಾಶಯ ಹೇಳಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈಚಿನ ಕರ್ನಾಟಕ ಚುನಾವಣೆಯ ವೇಳೆ ವೈಯಕ್ತಿಕವಾಗಿ ಮತ್ತು ಪಕ್ಷದ ವಿರುದ್ದ ತಾನು ಮಾತಿನ ದಾಳಿ ನಡೆಸಿರುವುದಕ್ಕೆ ಕ್ಷಮೆಯಾಚಿಸಿದ್ದಾರೆ. ಹಿಂದುಸ್ತಾನ ಸಮಾಚಾರ/ಆರ್.ಎಸ್/ಯ.ಮ
image