Hindusthan Samachar
Banner 2 सोमवार, नवम्बर 19, 2018 | समय 14:25 Hrs(IST) Sonali Sonali Sonali Singh Bisht

ಇಂಡಿಗೊ ವಿಮಾನದ ಇಂಜಿನ್ ವಿಫಲ - ಪೈಲಟ್ ನಿಂದ ತಪ್ಪಿದ ದುರಂತ

By HindusthanSamachar | Publish Date: May 18 2018 2:29PM
ಇಂಡಿಗೊ ವಿಮಾನದ ಇಂಜಿನ್ ವಿಫಲ - ಪೈಲಟ್ ನಿಂದ ತಪ್ಪಿದ ದುರಂತ
ಲಕ್ನೋ, ಮೇ.18 (ಹಿ ಸ) - ಇಲ್ಲಿನ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಲಕ್ನೋದಿಂದ ಮುಂಬಯಿಗೆ ಹಾರಲಿದ್ದ ಇಂಡಿಗೊ ವಿಮಾನದ ಒಂದು ಇಂಜಿನ್ ಕೆಟ್ಟು ಹೋಗಿರುವುದನ್ನು ಸಕಾಲದಲ್ಲಿ ಕಂಡುಕೊಂಡ ಪೈಲಟ್ ಸಂಭಾವ್ಯ ದುರಂತ ತಪ್ಪಿಸಿದ್ದಾರೆ. ಈ ಘಟನೆ ಇಂದು ಬೆಳಗ್ಗೆ 7.45ರ ಹೊತ್ತಿಗೆ ನಡೆಯಿತು. ವಿಶೇಷವೆಂದರೆ ಇಂಡಿಗೊ ವಿಮಾನದ ಇಂಜಿನ್ ಒಂದು ವಿಫಲವಾಗಿದೆ ಎಂಬುದನ್ನು ವಿಮಾನದೊಳಗೆ ಅದಾಗಲೇ ಆಸೀನರಾಗಿದ್ದ ಪ್ರಯಾಣಿಕರಿಗೆ ಅಧಿಕಾರಿಗಳು ತಿಳಿಸಲಿಲ್ಲ. ರನ್ ವೇಯಲ್ಲೇ ಉಳಿದಿದ್ದ ವಿಮಾನದೊಳಗೆ ಪ್ರಯಾಣಿಕರು ಏನನ್ನೂ ಅರಿಯದವರಾಗಿ ಹಾಗೆಯೇ ಬಹಳ ಹೊತ್ತು ಕುಳಿತಿರಬೇಕಾದ ಸ್ಥಿತಿ ಉಂಟಾಯಿತು. ಆಗ ಕೆಲವು ಪ್ರಯಾಣಿಕರು ವಿಮಾನದೊಳಗೆ ಬಿಸಿ ಏರುತ್ತಿರುವುದರಿಂದ ಇನ್ನಷ್ಟು ಹೆಚ್ಚು ಹೊತ್ತು ಕುಳಿತಿರಲು ಸಾಧ್ಯವಿಲ್ಲ ಎಂದು ಪ್ರತಿಭಟನೆ ನಡೆಸಿದರು. ಆಗಲೇ ಅಧಿಕಾರಿಗಳು ವಿಮಾನದ ಕೆಟ್ಟುಹೋಗಿರುವ ಇಂಜಿನನ್ನು ಇಂಡಿಗೊ ಇಂಜಿನಿಯರ್ ಗಳ ತಂಡ ಸರಿಪಡಿಸುತ್ತಿದೆ ಎಂದು ತಿಳಿಸಿದರು. ಹಿಂದುಸ್ತಾನ ಸಮಾಚಾರ/ಆರ್.ಎಸ್/ಯ.ಮ
image