Hindusthan Samachar
Banner 2 रविवार, मई 27, 2018 | समय 11:00 Hrs(IST) Sonali Sonali Sonali Singh Bisht

ಇದು ಭಾರತ ಇತಿಹಾಸದ ಕಪ್ಪುಚುಕ್ಕೆ - ಗುಲಾಂ ನಬಿ ಆಜಾದ್

By HindusthanSamachar | Publish Date: May 18 2018 2:23PM
ಬೆಂಗಳೂರು, ಮೇ.18 (ಹಿ ಸ) - ನಮಗೆ ಕೇಳಿದರೆ ಇಂದೇ ಬಹುಮತ ಸಾಬೀತುಪಡಿಸುತ್ತೇವೆ. ಆದರೆ, ಬಿಜೆಪಿಗೆ ಆ ಸಾಮರ್ಥ್ಯ ಇಲ್ಲ. ಆದರೂ ರಾಜ್ಯಪಾಲರು ಅವರನ್ನೇ ಸರ್ಕಾರ ರಚಿಸಲು ಕರೆದರು. ಇದು ಭಾರತ ಇತಿಹಾಸದ ಕಪ್ಪುಚುಕ್ಕೆ. ದೇಶದ ಯಾವುದೇ ರಾಜ್ಯಪಾಲರು ಹೀಗೆ ಮಾಡಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಆಪಾದಿಸಿದರು. ಇಂದು ಸುಪ್ರೀಂ ಕೋರ್ಟ್ ಆದೇಶ ಬಂದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸಂವಿಧಾನದ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಮಣಿಪುರ, ಗೋವಾದಲ್ಲಿಯೂ ಹೀಗೆಯೇ ಆಗಿತ್ತು ಎಂದರು. ವಿಧಾನಸಭೆ ಚುನಾವಣೆಯ ನಂತರ ಕರ್ನಾಟಕದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಜೆಡಿಎಸ್–ಕಾಂಗ್ರೆಸ್ ಮೈತ್ರಿ 117 ಸದಸ್ಯರ ಸಂಖ್ಯೆ ಇತ್ತು. ನಾವು ತಕ್ಷಣ ರಾಜ್ಯಪಾಲರನ್ನು ಭೇಟಿಯಾದೆವು. ಮೂರು ಸಲ ಅವರನ್ನು ಭೇಟಿಯಾಗಿದ್ದೆವು. ಬಿಜೆಪಿ ನಾಯಕರು ಅವಕಾಶ ಕೋರುವ ಮೊದಲು ನಾವು ಕೋರಿದ್ದೆವು ಎಂದರು. ಗೋವಾ, ಮೇಘಾಲಯ, ಮಣಿಪುರದ ರಾಜ್ಯಪಾಲರುಗಳು ಸರ್ಕಾರ ರಚಿಸುವ ಆಟಕ್ಕೆ ಹೊಸ ನಿಯಮಗಳನ್ನೇ ರೂಪಿಸಿದ್ದಾರೆ. ಅದೇ... For More details Please login to Hindusthan Samachar
image