Hindusthan Samachar
Banner 2 गुरुवार, दिसम्बर 13, 2018 | समय 03:30 Hrs(IST) Sonali Sonali Sonali Singh Bisht

ತಡರಾತ್ರಿ ಬಿರುಗಾಳಿ ಸಹಿತ ಮಳೆ - ಮರ, ವಿದ್ಯುತ್ ಪರಿವರ್ತಕ ಬಿದ್ದು 4 ಕಾರು ಹಾನಿ

By HindusthanSamachar | Publish Date: May 18 2018 1:35PM
ತಡರಾತ್ರಿ ಬಿರುಗಾಳಿ ಸಹಿತ ಮಳೆ - ಮರ, ವಿದ್ಯುತ್ ಪರಿವರ್ತಕ ಬಿದ್ದು 4 ಕಾರು ಹಾನಿ
ಮಂಗಳೂರು, ಮೇ.18 (ಹಿ ಸ) - ನಗರದಲ್ಲಿ ನಿನ್ನೆ ತಡರಾತ್ರಿ ಭಾರಿ ಗಾಳಿ ಸಹಿತ ಮಳೆಯಾಗಿದ್ದು, ನಗರದ ಬಾಬುಗುಡ್ಡೆಯಲ್ಲಿ ಮರ ಬಿದ್ದು ವಿದ್ಯುತ್ ಪರಿವರ್ತಕ, ಕಾರುಗಳು ಜಖಂಗೊಂಡಿವೆ. ತಡರಾತ್ರಿ 12 ರ ಸುಮಾರಿಗೆ ಮಳೆ ಆರಂಭವಾಯಿತು. ನಸುಕಿನ 2.30ರ ವೇಳೆಗೆ ಬಿರುಗಾಳಿಗೆ ಮರ ಬಿದ್ದು ಬಾಬುಗುಡ್ಡೆಯಲ್ಲಿನ ವಿದ್ಯುತ್ ಪರಿವರ್ತಕ ಹಾಗು ನಾಲ್ಕು ಕಾರುಗಳು ಜಖಂಗೊಡವು. ಬೆಳಿಗ್ಗೆ 9 ರವರೆಗೂ ಜಿಟಿ ಜಿಟಿ ಮಳೆ ಬೀಳುತ್ತಿತ್ತು. ಮರಗಳು ಬಿದ್ದು ವಿದ್ಯುತ್ ಕಂಬ ಮುರಿತು ಪರಿವರ್ತಕಕ್ಕೆ ಹಾನಿಯಾಗಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಮುರಿದು ಬಿದ್ದ ಕಂಬಗಳು ಹಾಗೂ ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಹಿಂದುಸ್ತಾನ ಸಮಾಚಾರ/ಆರ್.ಎಸ್/ಯ.ಮ
image