Hindusthan Samachar
Banner 2 रविवार, मई 27, 2018 | समय 10:59 Hrs(IST) Sonali Sonali Sonali Singh Bisht

ಸಿಮೆಂಟ್ ಲಾರಿ - ಟಿಪ್ಪರ್ ಮುಖಾಮುಖಿ ಡಿಕ್ಕಿ- ಚಾಲಕ, ಕ್ಲೀನರ್ ಗೆ ಗಾಯ

By HindusthanSamachar | Publish Date: May 18 2018 1:37PM
ಕಲಬುರ್ಗಿ, ಮೇ.18 (ಹಿ ಸ) - ಇಲ್ಲಿನ ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಬಂಕ್ ಬಳಿ ಇಂದು ಸಿಮೆಂಟ್ ಲಾರಿ ಹಾಗು ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ನಡು ರಸ್ತೆಯಲ್ಲಿ ಲಾರಿ ಪಲ್ಟಿಯಾಗಿದ್ದು, ಸಿಮೆಂಟ್ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಟಿಪ್ಪರ್ ಚಾಲಕ ಮತ್ತು ಕ್ಲೀನರ್ ಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಮಳಖೇಡದಿಂದ ಆಳಂದ ತಾಲೂಕು ಪಟ್ಟಣ ಗ್ರಾಮಕ್ಕೆ ತೆರಳುತ್ತಿತ್ತು. ಟಿಪ್ಪರ್ ಹುಮನಾಬಾದ್ ರಸ್ತೆ ಮಾರ್ಗವಾಗಿ ಜೇವರ್ಗಿ ಕಡೆ ಹೊರಟಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದರು. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದುಸ್ತಾನ ಸಮಾಚಾರ/ಆರ್.ಎಸ್/ಯ.ಮ
image