Hindusthan Samachar
Banner 2 रविवार, सितम्बर 23, 2018 | समय 05:44 Hrs(IST) Sonali Sonali Sonali Singh Bisht

ತಿರುಪತಿ ವೆಂಕಟರಮಣನ ದರ್ಶನ ಪಡೆದ ಹೆಚ್.ಡಿ. ದೇವೇಗೌಡ

By HindusthanSamachar | Publish Date: May 18 2018 1:30PM
ತಿರುಪತಿ ವೆಂಕಟರಮಣನ ದರ್ಶನ ಪಡೆದ ಹೆಚ್.ಡಿ. ದೇವೇಗೌಡ
ತಿರುಪತಿ, ಮೇ.18 (ಹಿ ಸ) - ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ಇಂದು ತಮ್ಮ ಹುಟ್ಟು ಹಬ್ಬದ ನಿಮಿತ್ತ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದರು. ಹೆಚ್.ಡಿ.ದೇವೇಗೌಡ ಅವರು ಕುಟುಂಬದ ಸದಸ್ಯರ ಜತೆ ನಿನ್ನೆ ಬೆಂಗಳೂರಿನಿಂದ ತಿರುಪತಿಗೆ ತೆರಳಿದ್ದರು. ರಾಜ್ಯ ರಾಜಕೀಯದಲ್ಲಿ ಬಿರುಸಿನ ಬೆಳವಣಿಗೆಗಳಾಗುತ್ತಿರುವ ವೇಳೆ ದೇವೇಗೌಡರು ತಿರುಪತಿಗೆ ಹೊರಟಿದ್ದೇಕೆ ಎಂಬ ಪ್ರಶ್ನೆ ಚರ್ಚೆಯಾಗುತ್ತಿತ್ತು. ಈ ವೇಳೆ ಅವರು, ತಮ್ಮ ಜನ್ಮ ದಿನದಂದು ಪ್ರತಿ ವರ್ಷ ತಿರುಪತಿಗೆ ಹೋಗುತ್ತೇನೆ ಅದರಂತೆ ಇಂದೂ ಹೋಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು. ಹಿಂದುಸ್ತಾನ ಸಮಾಚಾರ/ಆರ್.ಎಸ್/ಯ.ಮ
image