Hindusthan Samachar
Banner 2 रविवार, मई 27, 2018 | समय 11:00 Hrs(IST) Sonali Sonali Sonali Singh Bisht

ಪಾಕ್ ಅಪ್ರಚೋದಿತ ಗುಂಡಿನ ದಾಳಿ - ಯೋಧ ಹುತಾತ್ಮ

By HindusthanSamachar | Publish Date: May 18 2018 1:31PM
ಜಮ್ಮು-ಕಾಶ್ಮೀರ, ಮೇ.18 (ಹಿ ಸ) - ಜಮ್ಮು ಮತ್ತು ಕಾಶ್ಮೀರದ ಆರ್''ಎಸ್ ಪುರ ಸೆಕ್ಟರ್ ಬಳಿಕ ಪಾಕಿಸ್ತಾನ ಇಂದು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ದಾಳಿಯಲ್ಲಿ ಇಬ್ಬರು ನಾಗರೀಕರಿಗೆ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆರ್''ಎಸ್ ಪುರ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಸೀತಾರಾಮ್ ಉಪಾಧ್ಯಾಯ ಎಂಬ ಬಿಎಸ್ಎಫ್ ಯೋಧ ಹುತಾತ್ಮರಾಗಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಸೀತಾರಾಮ್ ಉಪಾಧ್ಯಾಯ ಅವರು ಜಾರ್ಖಾಂಡ್ ಮೂಲದವರಾಗಿದ್ದು, 1 ವರ್ಷದ ಪುತ್ರ ಹಾಗು 3 ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಪಾಕಿಸ್ತಾನದ ಆಪ್ರಚೋದಿತ ಗುಂಡಿನ ದಾಳಿಗೆ ಇಬ್ಬರು ನಾಗರೀಕರೂ ಕೂಡ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಡಿಯಲ್ಲಿ ಪದೇ ಪದೇ ತನ್ನ ಉದ್ಧಟತನವನ್ನು ಪ್ರದರ್ಶಿಸುತ್ತಿರುವ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಗಡಿಯಿಂದ 3 ಕಿ.ಮೀ ದೂರದಲ್ಲಿರುವ ಶಾಲೆಗಳನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು... For More details Please login to Hindusthan Samachar
image