Hindusthan Samachar
Banner 2 रविवार, मई 27, 2018 | समय 10:57 Hrs(IST) Sonali Sonali Sonali Singh Bisht

ಪಾಕ್ ಉಲ್ಲೇಖಿತ ರಾಹುಲ್ ಹೇಳಿಕೆ ಖಂಡನೀಯ - ಕೇಂದ್ರ ಸಚಿವ ಅಹಿರ್

By HindusthanSamachar | Publish Date: May 18 2018 1:32PM
ನವದೆಹಲಿ, ಮೇ.18 (ಹಿ ಸ) - ಸರ್ವಾಧಿಕಾರದ ಅಧೀನದಲ್ಲಿರುವ ಪಾಕಿಸ್ತಾನದಲ್ಲಿರುವಂತಹದ್ದೇ ಪರಿಸ್ಥಿತಿ ಇಂದು ಭಾರತದಲ್ಲಿಯೂ ನಿರ್ಮಾಣವಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ದೇಶಕ್ಕೆ ಅವಮಾನ ಮಾಡಿದ್ದಾರೆ. ಅವರ ಹೇಳಿಕೆ ಖಂಡನೀಯವಾದುದು ಎಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ಇಂದು ಹೇಳಿದ್ದಾರೆ. ರಾಹುಲ್ ಗಾಂಧಿ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಆಡಳಿತಾಢ ಪಕ್ಷವನ್ನು ವಿರೋಧ ಪಕ್ಷಗಳು ಟೀಕೆ ಮಾಡುವುದು ಸರಿ. ಆದರೆ, ಕಾಂಗ್ರೆಸ್ ಅಧ್ಯಕ್ಷರು ದೇಶದ ವಿರುದ್ಧ ಮಾತನಾಡಿದ್ದಾರೆ. ಈ ಮೂಲಕ ದೇಶಕ್ಕೆ ಅವಮಾನ ಮಾಡಿದ್ದಾರೆ. ಈ ರೀತಿಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇಂತಹ ಹೇಳಿಕೆಯನ್ನು ರಾಹುಲ್ ನೀಡಬಾರದಿತ್ತು ಎಂದು ಹೇಳಿದ್ದಾರೆ. ಇದರಂತೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರೂ ಕೂಡ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿದ್ದರು. ದೇಶದಲ್ಲಿರುವ ಪರಿಸ್ಥಿತಿಯನ್ನು ಥರ್ಡ್ ರೇಟ್ ಕಂಟ್ರಿ (ಕೀಳು ದೇಶ) ಪಾಕಿಸ್ತಾನಕ್ಕೆ ಹೋಲಿಕೆ ಮಾಡಿರುವುದು ಭಾರತಕ್ಕೆ ಅವಮಾನ ಮಾಡಿದಂತೆ ಎಂದು ತಿಳಿಸಿದ್ದಾರೆ. ಕರ್ನಾಟಕ ಇದೀಗ... For More details Please login to Hindusthan Samachar
image