Hindusthan Samachar
Banner 2 शनिवार, जुलाई 21, 2018 | समय 13:18 Hrs(IST) Sonali Sonali Sonali Singh Bisht

ಮುಂಬಯಿ ಶೇರು 103 ಅಂಕ ಇಳಿಕೆ

By HindusthanSamachar | Publish Date: May 18 2018 1:32PM
ಮುಂಬಯಿ ಶೇರು 103 ಅಂಕ ಇಳಿಕೆ
ಮುಂಬಯಿ, ಮೇ.18 (ಹಿ ಸ) - ನಗರದ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಆರಂಭಿಕ ವಹಿವಾಟಿನಲ್ಲಿ 59.51 ಅಂಕಗಳ ನಷ್ಟಕ್ಕೆ ಗುರಿಯಾಗಿ 35,089.61 ಅಂಕಗಳ ಮಟ್ಟಕ್ಕೆ ಜಾರಿದೆ. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 17.90 ಅಂಕಗಳ ನಷ್ಟದೊಂದಿಗೆ 10,664.80 ಅಂಕಗಳ ಮಟ್ಟಕ್ಕೆ ಇಳಿದು ದಿನದ ವಹಿವಾಟನ್ನು ಆರಂಭಿಸಿತ್ತು. ಆರಂಭಿಕ ವಹಿವಾಟಿನಲ್ಲಿ ಇಂದು 573 ಶೇರುಗಳು ಮುನ್ನಡೆ ಕಂಡವು; 587 ಶೇರುಗಳು ಹಿನ್ನಡೆಗೆ ಗುರಿಯಾದವು. ಎಚ್ ಡಿ ಎಫ್ ಸಿ ಬ್ಯಾಂಕ್, ಇನ್ ಫೋಸಿಸ್, ಐಸಿಐಸಿಐ ಬ್ಯಾಂಕ್, ಲಾರ್ಸನ್, ಎಕ್ಸಿಸ್ ಬ್ಯಾ,ಕ್, ಐಓಸಿ, ಟಿಸಿಎಸ್ ಶೇರುಗಳು ಶೇ.1ರ ನಷಕ್ಕೆ ಗುರಿಯಾದವು. ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 103.88 ಅಂಕಗಳ ನಷ್ಟದೊಂದಿಗೆ 35,045.24 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 23.20 ಅಂಕಗಳ ನಷ್ಟದೊಂದಿಗೆ 10,659.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. ರಿಲಯನ್ಸ್, ಸನ್ ಫಾರ್ಮಾ, ಎಚ್ ಡಿ ಎಫ್ ಸಿ ಬ್ಯಾಂಕ್, ಒಎನ್ ಜಿಸಿ, ಐಸಿಐಸಿಐ ಬ್ಯಾಂಕ್ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದವು. ಹಿಂದುಸ್ತಾನ ಸಮಾಚಾರ/ಆರ್.ಎಸ್/ಯ.ಮ
image