Hindusthan Samachar
Banner 2 गुरुवार, मार्च 21, 2019 | समय 05:34 Hrs(IST) Sonali Sonali Sonali Singh Bisht

ಜೆಡಿಎಸ್ ಗೆ ಯಾವ ಭಯವೂ ಇಲ್ಲ - ಅನಿತಾ ಕುಮಾರಸ್ವಾಮಿ

By HindusthanSamachar | Publish Date: Mar 17 2019 2:20PM
ಜೆಡಿಎಸ್ ಗೆ ಯಾವ ಭಯವೂ  ಇಲ್ಲ - ಅನಿತಾ ಕುಮಾರಸ್ವಾಮಿ
ಮೈಸೂರು, ಮಾ.17 (ಹಿ ೆಡಿಎಸ್ ಗೆ ಭಯ ಇರಬೇಕು ಎಂದ ಸುಮಲತಾ ಅಂಬರೀಶ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಅನಿತಾ ಕುಮಾರಸ್ವಾಮಿ ನಮಗೆ ಯಾವ ಭಯವೂ ಇಲ್ಲ ಎಂದು ಹೇಳಿದ್ದಾರೆ. ಮಾಜಿ ಸಚಿವ ಹಾಗು ಮಾಜಿ ವಿಧಾನಸಭೆ ಸಭಾಪತಿ ಕೆ.ಆರ್. ಪೇಟೆ ಕೃಷ್ಣ ಅವರನ್ನು ಭೇಟಿಯಾಗಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅನಿತಾ ಕುಮಾರಸ್ವಾಮಿ, ಮಂಡ್ಯದಲ್ಲಿ ನಮಗೆ ಯಾವ ಭಯನೂ ಇಲ್ಲ, ಸುಮಲತಾ ಅವರಿಗೆ ಭಯ ಇರಬೇಕು ಎಂದರು. ಮಂಡ್ಯ ಜನತೆಯ ಜೊತೆಗೆ ಕುಮಾರಸ್ವಾಮಿ ಹಾಗೂ ಹೆಚ್.ಡಿ.ದೇವೇಗೌಡರಿಗೆ ಒಳ್ಳೆಯ ಭಾಂದವ್ಯವಿದೆ. ಕಷ್ಟದ ಸಮಯದಲ್ಲೂ ಎಂಟು ಕ್ಷೇತ್ರಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಅವರು ನಮ್ಮನ್ನ ಕೈ ಬಿಡುವುದಿಲ್ಲ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ 20, ಜೆಡಿಎಸ್ 8 ಸ್ಥಾನ ಹಂಚಿಕೊಂಡಿದೆ. ಇಬ್ಬರು ಕುಳಿತು ಒಟ್ಟಾಗಿ ಮಾತನಾಡಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಜನತೆ ನಮ್ಮ ಪರವಾಗಿ ಇದ್ದಾರೆ. ಈ ಚುನಾವಣೆಯಲ್ಲಿ ಅವರು ನಮ್ಮ ಪರವಾಗಿ, ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದರು. ಹಿಂದುಸ್ತಾನ ಸಮಾಚಾರ/ಆರ್.ಎಸ್/ಯ.ಮ
लोकप्रिय खबरें
फोटो और वीडियो गैलरी
image