Hindusthan Samachar
Banner 2 गुरुवार, मार्च 21, 2019 | समय 22:05 Hrs(IST) Sonali Sonali Sonali Singh Bisht

ನಟ ಜಗ್ಗೇಶ್ ಜನ್ಮದಿನ - ಪ್ರೀಮಿಯರ್ ಪದ್ಮಿನಿ ಟೀಸರ್ ಉಡುಗೊರೆ

By HindusthanSamachar | Publish Date: Mar 17 2019 2:21PM
ನಟ  ಜಗ್ಗೇಶ್  ಜನ್ಮದಿನ -  ಪ್ರೀಮಿಯರ್ ಪದ್ಮಿನಿ  ಟೀಸರ್ ಉಡುಗೊರೆ
ಬೆಂಗಳೂರು, ಮಾ.17 (ಹಕನ್ನಡದ ನವರಸನಾಯಕ ಜಗ್ಗೇಶ್ ಹಾಗು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅವರುಗಳಿಗೆ ಇಂದು ಜನ್ಮದಿನದ ಸಂಭ್ರಮ. ನಟ ಜಗ್ಗೇಶ್ ಪ್ರತಿ ಬಾರಿಯಂತೆ ತಮ್ಮ ಹುಟ್ಟುಹಬ್ಬದಂದು ಮಂತ್ರಾಲಯಕ್ಕೆ ತೆರಳಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ಇದೇ ವೇಳೆ ನಟನ ಹುಟ್ಟುಹಬ್ಬಕ್ಕಾಗಿ ಪ್ರೀಮಿಯರ್ ಪದ್ಮಿನಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಶೇಷ ಅಭಿನಯ ನೀಡಿರುವ ಜಗ್ಗೇಶ್ ಜತೆಗೆ ಹಿರಿಯ ನಟಿ ಮಧುಬಾಲಾ ಹಾಗು ಸುಧಾರಾಣಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ದತ್ತಣ್ಣ, ಪ್ರಮೋದ್ ಪಂಜು, ಹಿತಾ ಚಂದ್ರಶೇಖರ್, ವಿವೇಕ್ ಸಿಂಹ ಸಹ ಚಿತ್ರದಲ್ಲಿ ಅಭಿನಯಿಸಿದ್ದು ಚಿತ್ರಕ್ಕೆ ಹೊಸದೊಂದು ಕಳೆಗಟ್ಟುವಂತಾಗಿದೆ. ಶ್ರುತಿ ನಾಯ್ಡು ನಿರ್ಮಾಣದ ಈ ಚಿತ್ರಕ್ಕೆ ರಮೇಶ್ ಇಂದಿರಾ ನಿರ್ದೇಶನವಿದೆ.ಅರ್ಜುನ್ ಜನ್ಯಾ ಸಂಗೀತವಿರುವ ಈ ಚಿತ್ರದ ಆಡಿಯೋ ಇದಾಗಲೇ ಬಿಡುಗಡೆಯಾಗಿದ್ದು ಇಂದು ಟೀಸರ್ ಹೊರಬಿದ್ದಿದೆ. ಸಧ್ಯವೇ ಚಿತ್ರ ತೆರೆ ಮೇಲೆ ಬರುವ ನಿರೀಕ್ಷೆ ಇದ್ದು ತಮ್ಮ ನೆಚ್ಚಿನ ನಟನ ಹೊಸ ಚಿತ್ರವನ್ನು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ನಿರೀಕ್ಷಿಸುತ್ತಿದ್ದಾರೆ. ಹಿಂದುಸ್ತಾನ ಸಮಾಚಾರ/ಆರ್.ಎಸ್/ಯ.ಮ
लोकप्रिय खबरें
फोटो और वीडियो गैलरी
image