Hindusthan Samachar
Banner 2 शनिवार, मार्च 23, 2019 | समय 14:25 Hrs(IST) Sonali Sonali Sonali Singh Bisht

ಮೋದಿ 'ಉದ್ಯಮಿಗಳ ಚೌಕೀದಾರ್ ಎಂದ ರಮ್ಯಾಗೆ ಟ್ವಿಟ್ಟಿಗರು ತರಾಟೆ

By HindusthanSamachar | Publish Date: Mar 17 2019 12:08PM
ಮೋದಿ 'ಉದ್ಯಮಿಗಳ ಚೌಕೀದಾರ್ ಎಂದ ರಮ್ಯಾಗೆ  ಟ್ವಿಟ್ಟಿಗರು ತರಾಟೆ
ನವದೆಹಲಿ, ಮಾ.17 (ಹಿಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ''ಕಾವಲುಗಾರನೇ ಕಳ್ಳ'' (ಚೌಕಿದಾರ್ ಚೋರ್ ಹೈ) ಎಂದು ಟೀಕಿಸಿದ್ದರು. ಈ ಟೀಕೆಗೆ ಪ್ರತಿಯಾಗಿ ಪ್ರಧಾನಿ ಮೋದಿ ಅವರು, ''ನಾನೂ ಕಾವಲುಗಾರ'' (ಮೈ ಭೀ ಚೌಕಿದಾರ್) ಎಂದು ಟ್ವೀಟ್ ಅಭಿಯಾನ ಹರಿಬಿಟ್ಟು ಪ್ರತ್ಯುತ್ತರ ನೀಡಿದ್ದರು. ಪ್ರಧಾನಿಯ ಈ ಟ್ವೀಟ್ ಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ನಾಯಕಿ ರಮ್ಯಾ, ''ಪ್ರಧಾನಿ ಮೋದಿ ಉದ್ಯಮಿಗಳ ಚೌಕಿದಾರ್'' ಎಂದು ಮತ್ತೆ ಟೀಕಿಸಿದ್ದಾರೆ. ಆದರೆ, ಅವರ ಟ್ವೀಟ್ ಗೆ ನೆಟ್ಟಿಗರು ಟ್ವೀಟ್ಗಳ ಸುರಿಮಳೆಗೈಯುವ ಮೂಲಕ ಟ್ರೋಲ್ ಮಾಡಿ ರಮ್ಯಾ ಕಾಲೆಳೆದಿದ್ದಾರೆ. ಮೋದಿ ಜೀ ಟ್ವಿಟ್ಟರ್ ಅಳಿಸಿದ್ದು ಯಾಕೇ? ನೀವು ಚೌಕಿದಾರ್ ಆಗಿದ್ದರೇ (ಕಾವಲುಗಾರನೇ) ನೀರವ್ ಮೋದಿ ಯಾಕಿಲ್ಲ? ಎಂದು ಅಣಕಿಸಿದ್ದಾರೆ. ಹೌದು, ನಿಜವಾಗಿ ನೀವು ಚೌಕಿದಾರ್ ಎಂದು ಮೋದಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ರಮ್ಯಾ, ಅಂಬಾನಿ, ಲಲಿತ್ ಮೋದಿ, ವಿಜಯ್ ಮಲ್ಯ ಮುಂತಾದ ಉದ್ಯಮಿಗಳ ರಕ್ಷಣೆ ಮಾಡುತ್ತಿದ್ದಾರೆ, ಲೂಟಿಕೋರರ ರಕ್ಷಣೆ ಮಾಡುತ್ತಿದ್ದಾರೆ ಎಂಬಂತೆ ಅವರ ಫೊಟೊಗಳನ್ನು ಎಡಿಟ್ ಮಾಡಿ, ಲೂಟಿ ಮಾಡಿದ ಹಣವನ್ನು ಮಾಹಿತಿ ಸಮೇತ ಹಂಚಿಕೊಂಡಿದ್ದಾರೆ. ಆದರೆ, ಈ ಟ್ವೀಟ್ ಸ್ವತ ರಮ್ಯಾಗೆ ತಿರುಗುಬಾಣವಾಗಿದೆ. ವಿಜಯ್ ಮಲ್ಯ ಒಳ್ಳೆಯ ವ್ಯಕ್ತಿ ಹಾಗು ನನಗೆ ಗೊತ್ತಿರುವ ನಿಜವಾದ ವ್ಯಕ್ತಿತ್ವ ಅವರದು ಎಂಬ ರಮ್ಯಆ ಹಳೆಯ ಟ್ವೀಟ್ ಅನ್ನು ನೆಟ್ಟಿಗರು ಟ್ರೋಲ್ ಮಾಡಿ ಟೀಕಿಸಿದ್ದಾರೆ. ಹಿಂದುಸ್ತಾನ ಸಮಾಚಾರ/ಆರ್.ಎಸ್/ಯ.ಮ
लोकप्रिय खबरें
फोटो और वीडियो गैलरी
image