Hindusthan Samachar
Banner 2 गुरुवार, मार्च 21, 2019 | समय 04:57 Hrs(IST) Sonali Sonali Sonali Singh Bisht

ಜಾತ್ಯತೀತ ಪಕ್ಷಗಳಿಗೆ ಬೆಂಬಲ : ಕೆ.ಸಿ.ಪುಟ್ಟಸಿದ್ದ ಶೆಟ್ಟಿ

By HindusthanSamachar | Publish Date: Mar 16 2019 8:50PM
ಜಾತ್ಯತೀತ ಪಕ್ಷಗಳಿಗೆ ಬೆಂಬಲ : ಕೆ.ಸಿ.ಪುಟ್ಟಸಿದ್ದ ಶೆಟ್ಟಿ
ಮಡಿಕೇರಿ, ಮಾ.16- ಕೋಪಕ್ಷವನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆಯು ಜನ ಜಾಗೃತಿಯ ಮೂಲಕ ಜಾತ್ಯತೀತ ಪಕ್ಷಗಳಿಗೆ ಬೆಂಬಲ ನೀಡಲಿದೆ ಎಂದು ವೇದಿಕೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದ ಶೆಟ್ಟಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನೋಟು ಅಮಾನ್ಯೀಕರಣದಿಂದ ಕಪ್ಪು ಹಣ ನಿರ್ಮೂಲನೆಯಾಗುವ ಬದಲು ಕೆಲವು ಹಣವಂತರ ಕಪ್ಪುಹಣ ಬಿಳಿ ಮಾಡಲು ಸಾಧ್ಯವಾಗದೆ ನಿರುದ್ಯೋಗ ಸಮಸ್ಯೆ ನಿರ್ಮೂಲನೆಯಾಗಿಲ್ಲ. ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ಬರುವ ಬದಲು ೨೦೧೮ರಲ್ಲಿ ಸ್ವಿಸ್ ಬ್ಯಾಂಕ್ ಖಾತೆಯಲ್ಲಿ ಶೇ.೫೦ರಷ್ಟು ಭಾರತೀಯರ ಠೇವಣಿ ಏರಿಕೆ ಆಗಿದೆ. ಗೋಸಂರಕ್ಷಣೆ ಹೆಸರಿನಲ್ಲಿ ನಿರಪರಾಧಿಗಳ ಕಗ್ಗೊಲೆಯಾಗುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಆಳ್ವಿಕೆಯಲ್ಲಿ ೧೭ ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿದ್ದರೂ ಅದನ್ನು ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಆದರೆ ಇದೀಗ ಹುತಾತ್ಮರ ಬಲಿದಾನವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು. ಕೊಡಗು -ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ’ಲಾ ಮೇಕರ್ ಆಗುವ ಬದಲು ಲಾ ಬ್ರೇಕರ್’ ಅಗುತ್ತಿದ್ದಾರೆ. ಕೊಡಗು ಮಳೆಹಾನಿ ಸಂತ್ರಸ್ತರಿಗೆ ಇನ್ನೂ ಪರಿಹಾರ ದೊರಕಿಲ್ಲ. ಕೇಂದ್ರ ಸರಕಾರದ ಆಮದು-ರಫ್ತು ನೀತಿಯಿಂದ ಕರಿಮೆಣಸು, ಕಾಫಿಗೆ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವೆಲ್ಲದಕ್ಕೂ ಸ್ಪಂದಿಸಿ ಪರಿಹಾರ ಕೊಡಿಸಬೇಕಾದ ಸಂಸದರು ’ವಿನೋದಕ್ಕಾಗಿ ಅಧಿಕಾರ’ ಎಂಬಂತಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ಸರಕಾರದ ವೈಫಲ್ಯಗಳ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಕರಪತ್ರ ವಿತರಣೆ, ಅಲ್ಲಲ್ಲಿ ಸಭೆಗಳನ್ನು ನಡೆಸಲಾಗುವುದು ಎಂದು ಪುಟ್ಟಸಿದ್ಧ ತಿಳಿಸಿದರು. ಸುದ್ದಿಗೊಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷ ಎಸ್.ನಟರಾಜ್, ಮೈಸೂರು ನಗರ ಅಧ್ಯಕ್ಷ ಕುಮಾರ ಶೆಟ್ಟಿ, ರಾಜ್ಯ ಸಂಚಾಲಕ ಹುಣ್ಸೋಗಿ ಚೆಲುವರಾಜ್, ಮೈಸೂರು ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬೋರಪ್ಪ ಶೆಟ್ಟಿ ಹಾಗೂ ಕುಶಾಲನಗರ ಮಹಿಳಾ ಕಾರ್ಯಕರ್ತೆ ಮಮತಾ ಉಪಸ್ಥಿತರಿದ್ದರು. ಹಿಂದೂಸ್ಥಾನ ಸಮಾಚಾರ / ೆಎಸ್ ಕೆ ಎಲ್ / ಎಂ ವೈ
लोकप्रिय खबरें
फोटो और वीडियो गैलरी
image