Hindusthan Samachar
Banner 2 गुरुवार, फरवरी 21, 2019 | समय 06:53 Hrs(IST) Sonali Sonali Sonali Singh Bisht

ಹುಟ್ಟೂರು,ಓದಿದ ಶಾಲೆ,ಬಾಲ್ಯದ ಗೆಳೆಯರ ಮರೆಯದಿರಲು ಕರೆ

By HindusthanSamachar | Publish Date: Dec 8 2018 9:30PM
ಹುಟ್ಟೂರು,ಓದಿದ ಶಾಲೆ,ಬಾಲ್ಯದ ಗೆಳೆಯರ ಮರೆಯದಿರಲು ಕರೆ
ಕೋಲಾರ: ಹುಟ್ಟಿದ ಊರುನ ಶಿಕ್ಷಣ ನೀಡಿದ ಶಾಲೆ ಹಾಗೂ ಬಾಲ್ಯದ ಗೆಳೆಯರನ್ನು ಎಂದಿಗೂ ಮರೆಯಬಾರದು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೂಲೂರು ಆಂಜಿನಪ್ಪ ಕರೆ ನೀಡಿದರು. ತಮ್ಮ ಹುಟ್ಟೂರಾದ ಸೂಲೂರು ಗ್ರಾಮದ ಸರ್ಕಾರಿ ಶಾಲೆ ಆವರಣಲ್ಲಿ ಶಾಲಾ ಅಭಿವೃದ್ದಿಗಾಗಿ ಹಳೆ ವಿದ್ಯಾರ್ಥಿಗಳ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದರು.. ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಾರಂಭವಾದ ಸೂಲೂರು ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಉನ್ನತ ವ್ಯಾಸಂಗ ಮಾಡಿ ದೊಡ್ಡ ಉದ್ಯೋಗದಲ್ಲಿದ್ದಾರೆ, ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ, ಜನಪ್ರತಿನಿಧಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರೆಲ್ಲರೂ ಮನಸ್ಸು ಮಾಡಿದರೆ ಈ ಶಾಲೆಯಲ್ಲಿ ಮೂಲಭೂತ ಹಾಗೂ ಭೌತಿಕ ಸೌಲಾಭ್ಯಗಳ ಕುಂದುಕೊರತೆಗಳನ್ನು ನಿವಾರಿಸುವುದು ಸುಲಭ ಮತ್ತು ಹುಟ್ಟೂರಿನ ಗೆಳೆಯರೊಂದಿಗೆ ಬಾಂಧವ್ಯವೂ ವೃದ್ದಿಯಾಗಲು ಸಹಖಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇವರನ್ನು ಹಳೆಯ ವಿದ್ಯಾರ್ಥಿಗಳೆನ್ನುವ ಬದಲಿಗೆ ಹಳೆಯ ಗೆಳೆಯರು ಎಂದು ಸಹ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅನುಭವ ಹಂಚಿಕೊಳ್ಳಬಹುದು, ಕಷ್ಟದಲ್ಲಿರುವ ಸ್ನೇಹಿತರಿಗೂ ಸಹಾಯವನ್ನು ಮಾಡಬಹುದು. ಆದ್ದರಿಂದ ಎಲ್ಲಾ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಸೇರಿಕೊಳ್ಳಲು ಇದು ಒಂದು ಉತ್ತಮ ಅವಕಾಶವಾಗಿದ್ದು, ಶಿಕ್ಷಣ ಇಲಾಖೆ ಈ ವ್ಯವಸ್ಥೆ ಮಾಡಿರುವುದಕ್ಕಾಗಿ ಇಲಾಖೆಗೆ ಧನ್ಯವಾದ ಸಲ್ಲಿಸಿದರು. ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಮಾತನಾಡಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಇಲಾಖೆಯ ಜತೆಯಲ್ಲಿ ಪೋಷಕರು, ಹಾಗೂ ಹಳೆಯ ವಿದ್ಯಾರ್ಥಿಗಳು ಕೈಜೋಡಿಸಬೇಕು, ಶಾಲೆಯ ಸಮಗ್ರ ಅಭಿವೃದ್ದಿಗೆ ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು. ಸರ್ಕಾರಿ ಶಾಲೆಗಳ ದಾಖಲಾತಿ ಅಭಿವೃದ್ದಿಯೂ ಇಂದು ಅತಿ ಮುಖ್ಯವಾಗಿದ್ದು, ಹಾಜರಾತಿ ಹೆಚ್ಚಿಸಲು ಸಹ ಪೋಷಕರು ಶಿಕ್ಷಕರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಬಸವರಾಜ ಒಡೆಯರ್, ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ವೃತ್ತಿ ಶಿಕ್ಷಣ ಶಿಕ್ಷಕ ನಾರಾಯಣಸ್ವಾಮಿ, ಹಳೆ ವಿದ್ಯಾರ್ಥಿಗಳಾದ ದೇವರಾಜ್, ಬೈರಡ್ಡಿ, ಬೈರೇಗೌಡ, ಮುನಿಆಂಜಿನಪ್ಪ, ಮುನಿತಿಮ್ಮಪ್ಪ, ಪ್ರಭಾಕ್, ಬಾಲಾಜಿ, ರಾಧಮ್ಮ, ಸುನೀಲ್, ಶ್ರೀನಿವಾಸಪ್ಪ ಮತ್ತಿತರರು ಭಾಗವಹಿಸಿದ್ದರು. ಚಿತ್ರ:ಕೋಲಾರ ತಾಲ್ಲೂಕಿನ ಸೂಲೂರು ಗ್ರಾಮದ ಸರ್ಕಾರಿ ಶಾಲೆ ಆವರಣಲ್ಲಿ ಶಾಲಾ ಅಭಿವೃದ್ದಿಗಾಗಿ ಹಳೆ ವಿದ್ಯಾರ್ಥಿಗಳ ಒಕ್ಕೂಟವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೂಲೂರು ಆಂಜಿನಪ್ಪ ಉದ್ಘಾಟಿಸಿದರು.
लोकप्रिय खबरें
चुनाव 2018
image