Hindusthan Samachar
Banner 2 गुरुवार, अप्रैल 25, 2019 | समय 15:34 Hrs(IST) Sonali Sonali Sonali Singh Bisht

ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಕಾಡಮಿ ಅಧಿಕಾರ ಲಾಲಸೆ ಕನ್ನಡಕ್ಕೆ ಕುತ್ತು

By HindusthanSamachar | Publish Date: Dec 8 2018 9:29PM
ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಕಾಡಮಿ ಅಧಿಕಾರ ಲಾಲಸೆ ಕನ್ನಡಕ್ಕೆ ಕುತ್ತು
ಕೋಲಾರ: ಕನ್ನಡ ರಾಷ್ಟ್ರೀಯತೆ ಮತ್ತು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ. ಅಧಿಕಾರವನ್ನು ಮುಂದುವರೆಸಲು ಹುನ್ನಾರ ದುರಾಸೆಗಳನ್ನು ತುಂಬಿಸಿಕೊಂಡಿರುವ ಕಸಾಪ ಮತ್ತು ಅಕಾಡೆಮಿಗಳ ಸ್ವಾರ್ಥ ಕನ್ನಡಕ್ಕೆ ಒಳಗಿನಿಂದ ಕುತ್ತು ತಂದಿದೆ. ಕನ್ನಡ ಸಿರಿ ಸಾಹಿತ್ಯ ಪರಿಷತ್ತು ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಧ್ವನಿಯಾಗಿ ಸಶಕ್ತಗೊಳಿಸುವುದೆಂಬ ಭರವಸೆ ಇದೆ ಎಂದು ಸಾಹಿತಿ ಹಾಗೂ ಭಾಷಾ ತಜ್ಞ ಸ.ರಘುನಾಥ್ ಅಭಿಪ್ರಾಯಪಟ್ಟರು. ಕನ್ನಡ ಸಿರಿ ಸಾಹಿತ್ಯ ಪರಿಷತ್ತು ವತಿಯಿಂದ ಕೋಲಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನುಡಿ ತಂಬೂರಿ ಬಿ.ಜಿ.ಎಲ್.ಸ್ವಾಮಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಗುಂಪುಗಳಾಗಬಾರದು. ಕನ್ನಡ ಕುಲ ಸಂಘಟನೆಗಳಾಗಬೇಕು, ಕನ್ನಡ ಬಲಿಷ್ಟಗೊಳ್ಳಬೇಕು. ತೆಲಗು ನಮಗೆ ಸೋದರಭಾಷೆ. ಅನೇಕ ತೆಲುಗು ಸಾಹಿತಿಗಳು ಕನ್ನಡಕ್ಕೆ ಅನುವಾದವಾಗಬೇಕೆಂದು ಕಾಯುತ್ತಿದ್ದಾರೆ. ನಾವು ಕನ್ನಡವನ್ನು ಜಾತಿಗಳನ್ನಾಗಿ ಕಟ್ಟುತ್ತಿರುವುದು ಅಸಹ್ಯವಾಗಿದೆ ಎಂದರು. ಕನ್ನಡ ನಾಡು ಉದ್ಧಾರವಾಗಬೇಕಾದರೆ ರೈತರು ಸೃಷ್ಟಿಯಾಗಬೇಕು. ರೈತ ಕುಲ ಕನ್ನಡ ಕುಲವಾಗಬೇಕು. ಬೇಂದ್ರೆ ಪ್ರತಿಷ್ಟಾನ ನಡೆಸುವ ಕಾರ್ಯಕ್ರಮಗಳನ್ನು ಗಮನಿಸಿದಾಗ ಮಾಸ್ತಿ, ಡಿ.ವಿ.ಜಿ ಪ್ರತಿಷ್ಟಾನ ಗೆರೆ ಎಳೆದುಕೊಂಡು ನಡೆಯುತ್ತಿರುವುದು ನಾಚಿಕೆ ತರುವಂತಹುದು ಎಂದು ಬೇಸರ ವ್ಯಕ್ತಪಡಿಸಿದರು. ಕನ್ನಡ ಹೆಮ್ಮೆಯ ವಿಚಾರ ಸಿರಿ ಸಾಹಿತ್ಯ ಪರಿಷತ್ತು ಆಗಬೇಕು. ತಂಗಳು ರುಚಿ ತಂಗಳು ಕಟ್ಟುವ ಕೆಲಸವಾಗಬೇಕು. ಓವನ್ ಬಿಸಿ ಬೇಡ ತಂಗಳು ಬುತ್ತಿ ನೀಡುವ, ಸ್ವೀಕರಿಸುವ ಕೆಲಸ ಸಿರಿ ಸಾಹಿತ್ಯ ಪರಿಷತ್ತಿನದಾಗಲಿ ಎಂದು ಶುಭ ಹಾರೈಸಿದರು. ಕನ್ನಡ ಉಪನ್ಯಾಸಕ ಹಾಗೂ ನುಡಿ ಪರಿಚಾರಕ ಜೆ.ಜಿ ನಾಗರಾಜ್ ಮಾತನಾಡಿ ಡಿ.ವಿ.ಜಿ ಯವರನ್ನು ಮಂಕುತಿಮ್ಮನ ಕಗ್ಗಕ್ಕೆ ಸಿಕ್ಕಿಸಿ ಬಿಟ್ಟಿದ್ದಾರೆ. ಅವರ ಅನೇಕ ಅದ್ಭುತ ಕೃತಿಗಳು ಜನರಿಗೆ, ಓದುಗರಿಗೆ ಪರಿಚಯವಾಗದ ರೀತಿಯಲ್ಲಿ ಅವರ ಮಗ ಬಿ.ಜಿ.ಎಲ್ ಸ್ವಾಮಿಯವರನ್ನು ಮರೆ ಮಾಡಿರುವುದು ಸರಿಯಲ್ಲ. ಸಾಹಿತಿ, ಪ್ರಾಧ್ಯಾಪಕ ಬಿ.ಜಿ.ಎಲ್ ಸ್ವಾಮಿ ಅನೇಕ ಕೃತಿಗಳನ್ನು ಬರೆದಿದ್ದರೂ ಅವರು ಅವರ ಸಾಹಿತ್ಯವನ್ನು ಕಾಲೇಜುಗಳಲ್ಲಿ ಪರಿಚಯಿಸುವ ಕೆಲಸಕ್ಕೆ ಈ ಕಾರ್ಯಕ್ರಮ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು. ಕನ್ನಡ ಸಿರಿ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯದ ಕೆಲಸಗಳು ಮುಕ್ತವಾಗಿ ನಡೆಯುತ್ತಿಲ್ಲ. ಹೆಸರಿಗೋಸ್ಕರ, ಮರ್ಜಿಗೋಸ್ಕರ ಕೆಲಸ ನಡೆಯುತ್ತಿದೆ. ಕಸಾಪ ಈಗ ಉಳ್ಳವರಿಗಾಗಿ ಸೀಮಿತ ಮಾಡುವ ಕೆಲವೇ ಸದಸ್ಯತ್ವದ ಶುಲ್ಕ ೫೧೦ ರೂ ಆಗಿದೆ. ಸಾಮಾನ್ಯ ಕನ್ನಡಿಗ ಕಸಾಪದಿಂದ ದೂರವಾಗುವ ಸ್ಪಷ್ಟ ಚಿತ್ರಣ ಕಾಣುತ್ತಿದೆ. ಲಕ್ಷಾಂತರ, ಕೋಟ್ಯಾಂತರ ರೂಪಾಯಿಗಳು ದುಂದುವೆಚ್ಚ ಆಗುತ್ತಿದೆ. ಪುಸ್ತಕ ಪ್ರೇಮಿಗಳನ್ನು ತಯಾರು ಮಾಡುವ ಪರಿಷತ್ತು ಆಗಬೇಕಿದೆ. ಕಲಾವಿದರನ್ನು ಗುರ್ತಿಸುವಂತಹ ಕೆಲಸ ಕಸಾಪದಿಂದ ಮಾಡಿಲ್ಲ. ಸಿರಿ ಸಾಹಿತ್ಯ ಪರಿಷತ್ತು ಈ ಕೆಲಸವನ್ನು ಮಾಡುತ್ತದೆ ಎಂದರು. ರಂಗತಜ್ಞ ಬೆಂಗಳೂರಿನ ರುದ್ರೇಶ್ ಅದರಂಗಿ ಪ್ರಾಧ್ಯಾಪಕನ ಪೀಠದಿಂದ ಕೃತಿ ಬಗ್ಗೆ ವಿಷಯ ಮಂಡನೆ ಮಾಡಿ ಮಾತನಾಡುತ್ತಾ ಎಲ್ಲಾ ಶಿಕ್ಷಕರು, ಪ್ರಾಧ್ಯಾಪಕರು ಶಿಕ್ಷಕ ವೃತ್ತಿಗೆ ಹೋಗುವುದಕ್ಕೆ ಮೊದಲು ಈ ಕೃತಿಯನ್ನು ಓದಿದರೆ ಒಂದು ತಲೆಮಾರು ಉದ್ದಾರವಾಗುತ್ತದೆ. ಪರಂಪರೆ ಬೆಳೆಯುತ್ತದೆ ಎಂದರು. ಪುಸ್ತಕವನ್ನು ಆಧ್ಯಯನ ಮಾಡದಿದ್ದರೆ ಶಿಕ್ಷಕರು ಹಲವಾರು ವಿಚಾರಗಳನ್ನು ಕಳೆದುಕೊಳ್ಳುತ್ತಾರೆ. ಶಿಕ್ಷಕ ವಿದ್ಯಾರ್ಥಿ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಪುಸ್ತಕ ಜೀವನಕ್ಕೆ ಪೂರಕ ಸಾಹಿತ್ಯ ಎಂಬುದನ್ನು ಕೃತಿ ಹೇಳುತ್ತದೆ. ಗ್ರಾಮ್ಯ ಭಾಷೆಯನ್ನು. ಆಡು ಭಾಷೆನು ಸಸ್ಯ ಮರಗಳ ಹೆಸರನ್ನು ಅರ್ಥವಾಗದ ಹೆಸರುಗಳನ್ನು ಹೇಳಿ ವಿಶ್ವವಿದ್ಯಾಲಯಗಳು ಕೊಲ್ಲುತ್ತಿವೆ. ಯುವ ಜನಾಂಗವನ್ನು ಕಟ್ಟಲು ಅರ್ಥಮಾಡಿಕೊಳ್ಳಲು ಸಮಾಜ ಕಟ್ಟಲು ಕೃತಿ ಸಹಾಯ ಮಾಡುತ್ತದೆ. ಅವರೆಲ್ಲ ಆ ಕೃತಿಗಳು ಲವಲವಿಕೆಯಿಂದ ಕೂಡಿರುತ್ತವೆ. ಎಂದರು. ಸಹಾಯಕ ವಿಜ್ಞಾನ ಲೇಖಕ ಹೆಚ್.ಎ ಪುರುಷೋತ್ತಮರಾವ್ ಹಸಿರು ಹೊನ್ನು-ನಮ್ಮ ಅರಿವು ವಿಷಯ ಮಂಡನೆ ಮಾಡಿ ಮಾತನಾಡಿ ಆ ಸಮಯದಲ್ಲಿ ವಿಮರ್ಶಕರಿಗೆ ಕೃತಿ ಅರ್ಥವಾಗಲಿಲ್ಲ. ಯಾವ ಪ್ರಕಾರದ ಕೃತಿ ಎಂಬುವುದು ಆ ಕಾಲಘಟ್ಟದ ಚರ್ಚೆಯಾಯ್ತು. ಸಿದ್ಧ ವಿಮರ್ಶಗೆ ಇದು ದಕ್ಕದು. ನಿಸರ್ಗಾನುಭವ, ಸಾಮಾಜಿಕ ಬದ್ಧತೆ, ಸಾಂಸ್ಕೃತಿಕ ಕಾಳಜಿ, ಜೀವನಾನುಭವ ಬದುಕನ್ನು ಕಟ್ಟಿಕೊಡುವ ಕೃತಿಇದು ಎಂದರು. ಹಸಿರನ್ನು ಜನರಿಗೆ ಜನಸಾಮಾನ್ಯರಿಗೆ ಸಾಮಾನ್ಯ ಓದುಗರಿಗೆ ಎಟಕುವಂತೆ ಅರ್ಥೈಸಿ ಕೃತಿ ಬರೆದಿದ್ದಾರೆ. ಕೃತಿಯು ಅಧಿಕಾರಿ ಶಾಹಿಯ ವಿಡಂಬನೆಯನ್ನು ಹೇಳುತ್ತದೆ. ಗಿಡಮರಗಳು ಬಳಕೆಯಿಂದ ಉಳಿಯುತ್ತವೆ ಹೊರತು ವೈಜ್ಞಾನಿಕ ಹೆಸರುಗಳಿಂದಲ್ಲ. ಹತ್ತು ಮುಖಗಳಲ್ಲಿ ಹತ್ತಾರು ಮುಖಗಳು ಬಿ.ಜಿ.ಎಲ್ ಸ್ವಾಮಿಯವರದ್ದು- ಹಾ.ಮಾ ನಾಯಕ. ವಿಜ್ಞಾನವನ್ನು ಕೆಳಹಂತಕ್ಕೆ ತಲಪುವ ಕಾರ್ಯದಲ್ಲಿ ಲೇಖಕರು ಪ್ರಯತ್ನಿಸಬೇಕು. ಪುಸ್ತಕಗಳು ಕಪಾಟಿನಲ್ಲಿ ಬಂಧಿಸುವ ಕಾರ್ಯದಿಂದ ಹರಿದಾಡಿಸಬೇಕು ಎಂದರು. ಸಾಹಿತಿ ಹಾಗೂ ಇತಿಹಾಸ ತಜ್ಞ ಡಾ.ಅರಿವು ಶಿವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಡಿ.ವಿ.ಜಿಯವರ ಹೆಸರನ್ನು ಉಳಿಸುವ ಕಾರ್ಯದಲ್ಲಿ ಬಿ.ಜಿ.ಎಲ್ ಸ್ವಾಮಿ ಯಶಸ್ಸನ್ನು ಪೆದವರು. ಶಿಕ್ಷಕನಾಗಿ, ಸಾಹಿತಿಯಾಗಿ, ಸರಳಜೀವಿಯಾಗಿ ಬದುಕನ್ನು ಕಳೆದವರು. ಬಿ.ಜಿ.ಎಲ್ ಸ್ವಾಮಿಯವರು ಅಲಕ್ಷಿತ ಸಾಹಿತಿಯಾಗಿರುವುದಕ್ಕೆ ಜವಾಬ್ದಾರಿ ಯಾರು. ಕಸಾಪ ಮಾಡದೆ ಇರುವ ಜವಾಬ್ದಾರಿಯನ್ನು ಕನ್ನಡ ಸಿರಿ ಸಾಹಿತ್ಯ ಪರಿಷತ್ತು ನಿರ್ವಹಿಸುತ್ತಿದೆ. ಇದು ಎಲ್ಲರ ಜವಾಬ್ದಾರಿ. ಇತಿಹಾಸವನ್ನು ಅರ್ಥ ಮಾಡಿಕೊಂಡು ಬದುಕನ್ನು ಕಟ್ಟಿಕೊಳ್ಳಬಹುದು ಎಂದರು. ಇದೇ ಸಂದರ್ಭದಲ್ಲಿ ಕರ್ನಾಟಕದ ಶ್ರೀನಿವಾಸಪುರ ತಾಲೂಕಿನ ಮೂಡಲ ದಿಕ್ಕಿನ ಕೊನೆಯ ಕನ್ನಡ ಹಳ್ಳಿ ಪಿ.ಚನ್ನಯ್ಯಗಾರಿಪಲ್ಲಿ ಗ್ರಾಮದ ಕನ್ನಡ ಶಾಲೆಯ ಶಿಕ್ಷಕರಾದ ಕೋದಂಡರಾಮಯ್ಯ, ಆನಂದಕುಮಾರ್ ರವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಎನ್.ಮುನಿವೆಂಕಟೇಗೌಡ,ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಉಪಸ್ಥಿತರಿದ್ದರು...
लोकप्रिय खबरें
फोटो और वीडियो गैलरी
image