Hindusthan Samachar
Banner 2 सोमवार, दिसम्बर 10, 2018 | समय 02:44 Hrs(IST) Sonali Sonali Sonali Singh Bisht

ಹೆದ್ದಾರಿ ಯೋಜನೆಗೆ ಪರಿಸರವಾದಿಗಳ ವಿರೋಧ : ಸೇವ್ ಕೊಡಗು, ಬಿಜೆಪಿ ಪ್ರತಿರೋಧ

By HindusthanSamachar | Publish Date: Dec 8 2018 9:25PM
ಹೆದ್ದಾರಿ ಯೋಜನೆಗೆ ಪರಿಸರವಾದಿಗಳ ವಿರೋಧ : ಸೇವ್ ಕೊಡಗು, ಬಿಜೆಪಿ ಪ್ರತಿರೋಧ
ಮಡಿಕೇರಿ, ಡಿ.08(ಹಿ.ಿನ ಪರಿಸರಕ್ಕೆ ಮಾರಕವಾದ ಚತುಷ್ಪಥ ಮತ್ತು ರೈಲ್ವೆ ಯೋಜನೆಗಳನ್ನು ಅನುಷ್ಟಾನಗೊಳಿಸುವುದನ್ನು ವಿರೋಧಿಸಿ ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ಪ್ರತಿಭಟನಾ ಮೆರವಣಿಗೆ ನಡೆಸಿತಾದರು, ಸಭಾ ಕಾರ್ಯಕ್ರಮದ ಆರಂಭದಲ್ಲಿ ಯೋಜನೆಗಳನ್ನು ಬೆಂಬಲಿಸುವ ವರ್ಗದಿಂದ ತೀವ್ರ ಪ್ರತಿರೋಧವನ್ನು ಎದುರಿಸಬೆಕಾಯಿತು. ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ಅಧ್ಯಕ್ಷ ರಾಜೀವ್ ಬೋಪಯ್ಯ, ಅಧ್ಯಕ್ಷರಾದ ಕರ್ನಲ್ ಸಿ.ಪಿ. ಮುತ್ತಣ್ಣ ಅವರ ನೇತೃತ್ವದಲ್ಲಿ, ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಬಳಿಯಿಂದ ಚತುಷ್ಪಥ ರಸ್ತೆ, ರೈಲ್ವೆ ಯೋಜನೆಗಳ ವಿರುದ್ಧವಾದ ಘೋಷಣೆ ಮತ್ತು ಫಲಕ, ಕಾವೇರಿ ನದಿಯ ಸಂರಕ್ಷಣೆಯ ಆಗ್ರಹಗಳೊಂದಿಗೆ ಮೆರವಣಿಗೆ ನಡೆಯಿತು. ಪ್ರತಿಭಟನಾ ಮೆರವಣಿಗೆ ಸರ್ಕಾರಾಲೇಲು, ಇಂದಿರಾ ಗಾಂಧಿ ವೃತ್ತ, ಖಾಸಗಿ ಬಸ್ ನಿಲ್ದಾಣ, ನಗರ ಠಾಣೆ, ಜನರಲ್ ತಿಮ್ಮಯ್ಯ ವೃತ್ತವನ್ನು ಹಾದು ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯಲ್ಲಿ ಮೇಜರ್ ಬಿ.ಎ.ನಂಜಪ್ಪ, ಕಾವೇರಿ ಸೇನೆ ಸಂಚಾಲಕ ಕಿಮ್ಮುಡಿರ ರವಿ ಚಂಗಪ್ಪ, ರಘ ಮಾಚಯ್ಯ, ಯುಕೋ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಸಂಜು ಚಿಣ್ಣಪ್ಪ, ಡಾ. ಬಿ.ಸಿ. ನಂಜಪ್ಪ, ತಮ್ಮು ಪೂವಯ್ಯ, ಚಂದ್ರ ಮೋಹನ್ ಸೇರಿದಂತೆ ಮೈಸೂರು ಮೊದಲಾದೆಡೆಗಳಿಂದ ಆಗಮಿದ್ದ ನೂರಾರು ಮಂದಿ ಪಾಲ್ಗೊಂಡಿದ್ದರು. ::: ಪ್ರತಿರೋಧ ಒಡ್ಡಲು ಮೊದಲೇ ಹಾಜರಿದ್ದರು ::: ಕೊಡಗಿನ ಅಭಿವೃದ್ಧಿಗೆ ಚತುಷ್ಪಥ ರಸ್ತೆ ಸೇರಿದಂತೆ ರೈಲ್ವೆ ಮಾರ್ಗಗಳು ಅತ್ಯಗತ್ಯವಾಗಿದೆ. ಇಂತಹ ಯೋಜನೆಗಳನ್ನು ವಿರೋಧಿಸುವ ಮೂಲಕ ಕೊಡಗಿನ ಅಭಿವೃದ್ಧಿಗೆ ತಡೆಯನ್ನುಂಟು ಮಾಡುತ್ತಿದ್ದಾರೆಂದು ಆರೋಪಿಸಿ, ಸೇವ್ ಕೊಡಗು ಸಂಘಟನೆ, ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರು ಗಾಂಧಿ ಮೈದಾನದಲ್ಲಿ ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ಆಯೋಜಿಸಿದ್ದ ಸಭಾ ಕಾರ್ಯಕ್ರಮದ ಪೆಂಡಾಲ್‌ನ ಆಸನಗಳಲ್ಲಿ ಆಸೀನರಾಗಿ ಕಾರ್ಯಕ್ರಮಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಗಾಂಧಿ ಮೈದಾನಕ್ಕೆ ಮೆರವಣಿಗೆ ಮೂಲಕ ಬಂದ ವೇದಿಕೆಯ ಬೆಂಬಲಿಗರು, ಅದಾಗಲೆ ಪೆಂಡಾಲ್‌ನಲ್ಲಿ ಕುಳಿತಿದ್ದ ತಮ್ಮ ಹೋರಾಟವನ್ನು ವಿರೋಧಿಸುವವರನ್ನು ಕಂಡು ಕೆಲ ಕಾಲ ವೇದಿಕೆಗೆ ಆಗಮಿಸದೆ ಮೈದಾನಲ್ಲೆ ಉಳಿದು, ಪೊಲೀಸರ ಬಳಿ ಸಭಾ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ವಾಗ್ವಾದ - ಈ ಹಂತದಲ್ಲಿ ಕೆಲ ವೇದಿಕೆಯ ಬೆಂಬಲಿಗರು ಪೆಂಡಾಲ್‌ಗೆ ಆಗಮಿಸಿದಾಗ ಮಾತಿನ ಚಕಮಕಿಯೂ ನಡೆದ ಘಟನೆ ನಡೆಯಿತು. ಡಿವೈಎಸ್‌ಪಿ ಸುಂದರರಾಜ್, ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ಐ.ಪಿ. ಮೇದಪ್ಪ, ಭರತ್ ಅವರು ವೇದಿಕೆ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುವ ಗುಂಪಿನಲ್ಲಿದ್ದ ಸೇವ್ ಕೊಡಗು ಸಂಘಟನೆಯ ಮಧು ಬೋಪಣ್ಣ, ಬಿಜೆಪಿಯ ಮನು ಮುತ್ತಪ್ಪ ಅವರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕು ಸಭೆಗೆ ಅಡ್ಡಿ ಬರಬಾರದೆಂದು ಹೇಳಿದರು, ಜಿಲ್ಲೆಯ ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸುವ ಮಂದಿಯ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ನಮ್ಮ ಒಂದಿಬ್ಬರಿಗೆ ಅವಕಾಶ ನೀಡುವಂತೆಯೂ ಆಗ್ರಹಿಸಿದರು. ::: ಧಿಕ್ಕಾರದ ಘೋಷಣೆ ::: ಈ ಎಲ್ಲಾ ಬೆಳವಣಿಗೆಗಳ ನಡುವೆ ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ಪ್ರಮುಖರು ಮತ್ತು ಹೋರಾಟವನ್ನು ಬೆಂಬಲಿಸಿದ ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಸಭೆಗೆ ಆಗಮಿಸಿದ್ದಲ್ಲದೆ, ಮೇಜರ್ ಬಿ.ಎ. ನಂಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಮೋಹಿತ್ ಪ್ರಾರ್ಥನೆ ಸಲ್ಲಿಸಿದರು. ಒಂದೆಡೆ ಪ್ರಾರ್ಥನೆ ನಡೆಯುತ್ತಿದ್ದರೆ ಮತ್ತೊಂದೆಡೆ ’ಬೋಲೋ ಭಾರತ್ ಮಾತಾಕೀ ಜೈ’, ಕೊಡಗಿನ ಅಭಿವೃದ್ಧಿಗೆ ತಡೆಯೊಡ್ಡುವವರಿಗೆ ಧಿಕ್ಕಾರ, ಚತುಷ್ಪಥ ರಸ್ತೆ, ರೈಲು ಬೇಕೇ ಬೇಕು ಎಂದು ಘೋಷಣೆಗಳನ್ನು ಕೂಗಿದ್ದಲ್ಲದೆ, ಸಭಾ ಕಾರ್ಯಕ್ರಮದ ಸ್ಥಳದಿಂದ ಘೋಷಣೆಗಳ ಸಹಿತವೆ ತೆರಳಿದರು. ಪೊಲೀಸರು ಮುಂಜಾಗ್ರತೆ ವಹಿಸಿದ್ದಲ್ಲದೆ, ಪ್ರತಿಭಟನಾಕಾರರು ತೆರಳುವವರೆಗೂ ಇದ್ದು ಶಾಂತಿ ಕದಡದಂತೆ ನೋಡಿಕೊಂಡರು. ರೈಲ್ವೆ, ಚತುಷ್ಪಥ ಪರವಾಗಿರುವ ಸೇವ್ ಕೊಡಗು ಸಂಘಟನೆಯ ಪದಾಧಿಕಾರಿಗಳಾದ ಬಿ.ಟಿ.ದಿನೇಶ್, ಜಿನ್ನು ನಾಣಯ್ಯ, ಉದಯ ಕುಮಾರ್, ಬಿಜೆಪಿ ಪ್ರಮುಖರಾದ ಮಹೇಶ್ ಜೈನಿ, ತಳೂರು ಕಿಶೋರ್ ಕುಮಾರ್, ಬಾಲಚಂದ್ರ ಕಳಗಿ, ಮಧು ದೇವಯ್ಯ, ತೆಕ್ಕಡೆ ಶೋಭಾ ಮೋಹನ್ ಮೊದಲಾದವರಿದ್ದರು. ಹಿಂದೂಸ್ತಾನ ಸಮಾಚಾರ / ಎಸ್ ಕೆ ಎಲ್ / ಎಂ ವೈ
image