Hindusthan Samachar
Banner 2 गुरुवार, जनवरी 24, 2019 | समय 01:07 Hrs(IST) Sonali Sonali Sonali Singh Bisht

ಬಿಜೆಪಿ 104 ಸ್ಥಾನ ಗೆಲ್ಲಲು ಮುಸ್ಲಿಂ ಸಮುದಾಯದ ಕೊಡುಗೆ ಇದೆ

By HindusthanSamachar | Publish Date: Nov 10 2018 8:02PM
ಬಿಜೆಪಿ 104 ಸ್ಥಾನ ಗೆಲ್ಲಲು ಮುಸ್ಲಿಂ ಸಮುದಾಯದ ಕೊಡುಗೆ ಇದೆ
ಹಾಸನ,ನ.10(ಹಿ.ಸ)-ಜಯೋಧಿಸಿ ಸಮ್ಮಿಶ್ರ ಸರಕಾರದ ವಿರುದ್ಧ ಕೊಡಗಿನ ಜನ ಪ್ರತಿಭಟನೆ ನಡೆಸುತ್ತಿದ್ದಾರೆ, ಆದರೇ ಕೊಡಗಿನಲ್ಲಿ ಅತೀಯಾದ ಮಳೆಯಿಂದ ಭೂ ಕುಸಿತ ಉಂಟಾದ ವೇಳೆ ಅತೀ ಹೆಚ್ಚು ಹಣವನ್ನು ಕೇಂದ್ರ ಸರಕಾರ ನೀಡಿದಿಯೊ ಇಲ್ಲವೇ ರಾಜ್ಯ ಸರಕಾರ ನೀಡಿದಿಯೊ ಎಂಬುವುದನ್ನು ಅಲ್ಲಿಯ ಜನ ಅರಿಯಬೇಕು ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು. ರಾಜ್ಯದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ104ಸ್ಥಾನ ಬರಲು ಮುಸ್ಲಿಂ ಸಮುದಾಯದವರ ಕೊಡುಗೆ ಇದೆ ಎಂಬುದನ್ನು ಮರೆಯಬಾರದು ಎಂದು ಶನಿವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಟಿಪ್ಪು ಜಯಂತಿ ಕಾರ‍್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನಂತರ ಜೆಡಿಎಸ್ ಬಿಜೆಪಿ ಸರಕಾರ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎಂಬ ವದಂತಿ ಯಿಂದಾಗಿ ಬಿಜೆಪಿ ಹೆಚ್ಚು ಅನುಕೂಲಕರವಾಯಿತು. ರಾಜ್ಯ ಅನೇಕ ಮಹನೀಯರ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಇದಕ್ಕೆ ಅಲ್ಪಸಂಖ್ಯಾತ ಸಮುದಾಯದವರು ಏನು ವಿರೋಧ ಮಾಡಿದ್ದಾರೆಯೇ?, ಹೀಗಿರುವಾದ ಅವರ ಸಮುದಾಯದ ಒಬ್ಬರ ಜಯಂತಿ ಮಾಡುವಾದ ವಿರೋಧ ಮಾಡುವುದು ಸರಿಯಲ್ಲ ಎಂದರು. ಬಿಜೆಪಿ ಶಾಸಕ ಗೈರು ಹಾಸನ ವಿಧಾನಸಾಭಾ ಕ್ಷೇತ್ರದ ಶಾಸಕ ಪ್ರೀತಮ್ ಜೆ ಗೌಡ ಕೂಡ ಟಿಪ್ಪು ಜಯಂತಿಗೆ ಗೈರಾಗಿದ್ದರು. ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಬೇಕಾಗಿದ್ದ ಶಾಸಕರು ಗೈರಾಗಿರುವ ಬಗ್ಗೆ ರೇವಣ್ಣ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ, ಜಿಲ್ಲೆಯಲ್ಲಿ ನೆಲೆಯಿಲ್ಲದ ಬಿಜೆಪಿಗೆ ಈ ಬಾರಿ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಒರ್ವ ಬಿಜೆಪಿ ಅಭ್ಯರ್ಥಿ ಜಯ ಸಾಧಿಸಲು ಜಿಲ್ಲೆಯ ಅಲ್ಪಸಂಖ್ಯಾತರ ಕೊಡುಗೆ ಅಪಾರವಿದೆ. ಅವರ ಋಣ ತೀರಸಲಾದರೂ ಅವರು ಕಾರ‍್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು ಎಂದು ಹೇಳಿದರು. ಇನ್ನು ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಶಾಂತಿಯುತವಾಗಿ ಟಿಪ್ಪು ಜಯಂತಿ ಆಚರಣೆ ಮಾಡಲಾಯಿತು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಹಾಗೂ ಪ್ರತಿಭಟನೆ ನಡೆದಿಲ್ಲ. ಹಿಂದೂಸ್ಥಾನ ಸಮಾಚಾರ,ಡಿಕೆ/ಎಂಎಸ್/ಎಂವೈ
image