Hindusthan Samachar
Banner 2 सोमवार, नवम्बर 19, 2018 | समय 00:19 Hrs(IST) Sonali Sonali Sonali Singh Bisht

ಮದ್ದೂರಿನಲ್ಲಿ ಮತ್ತೆ ಕಾಡಾನೆಗಳ ಉಪಟಳ;ಲ್ಲಿ ದಾಂಗುಿರುವ ಆನೆಗಳ ಹಿಂಡು

By HindusthanSamachar | Publish Date: Nov 10 2018 8:04PM
ಮದ್ದೂರಿನಲ್ಲಿ ಮತ್ತೆ ಕಾಡಾನೆಗಳ ಉಪಟಳ;ಲ್ಲಿ ದಾಂಗುಿರುವ ಆನೆಗಳ ಹಿಂಡು
ಮಂಡ್ಯ, ನ.10(ಹಿ.ಸ)-ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಮದ್ದೂರು ತಾಲೂಕಿನಲ್ಲಿ ಕಳೆದೊಂದು ವಾರದಿಂದ ನಾಲ್ಕು ಕಾಡಾನೆಗಳು ಸಂಚರಿಸುತ್ತಿದ್ದು, ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ವಾರದ ಹಿಂದಷ್ಟೇ ಮದ್ದೂರು ಪಟ್ಟಣದ ಗಡಿಯಂಚಿಗೆ ಆನೆಗಳು ಆಗಮಿಸಿದ್ದವು. ಇದೀಗ ಆ ತಾಲೂಕಿನ ಚಿಕ್ಕರಸಿನಕೆರೆ ಹೋಬಳಿಯ ಚಾಕನಹಳ್ಳಿ ಹಾಗೂ ಕಳ್ಳಿಮೆಳ್ಳೆದೊಡ್ಡಿ ಗ್ರಾಮಗಳ ಜಮೀನುಗಳಲ್ಲಿ ದಾಂಗುಡಿಯಿಟ್ಟಿರುವ ಆನೆಗಳ ಹಿಂಡು ಬೆಳೆ ಹಾನಿ ಉಂಟು ಮಾಡಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಕಬ್ಬಾಳು ಅರಣ್ಯ ವಲಯದಿಂದ ಕಾಡಾನೆಗಳು ಮದ್ದೂರು ತಾಲೂಕಿಗೆ ನುಗ್ಗಿವೆ. ಅವುಗಳನ್ನು ಮತ್ತೆ ಕಾಡಿಗೆ ಹಿಮ್ಮೆಟ್ಟಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹೈರಾಣಾಗಿದ್ದಾರೆ. ಚಾಕನಹಳ್ಳಿ ಮತ್ತು ಕಳ್ಳಿಮೆಳ್ಳೆದೊಡ್ಡಿ ಸುತ್ತಮುತ್ತಲ ಗ್ರಾಮಗಳಿಗೆ ಸೇರಿದ ರೈತರ ಭತ್ತ, ಕಬ್ಬು, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಆನೆಗಳು ನಾಶಪಡಿಸಿವೆ. ಆನೆಗಳ ಹಿಂಡು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಆನೆಗಳ ಸಮೀಪಕ್ಕೆ ಸಾರ್ವಜನಿಕರು ತೆರಳಿ, ಕೆರಳಿಸದಂತೆ ತಡೆಗಟ್ಟಲು ಪೊಲೀಸ್ ಪಹರೆ ಹಾಕಲಾಗಿದೆ. ಹಿಂಡಿನಲ್ಲಿ ಒಂದು ಮರಿಯಿದೆ. ಇಂಥ ಸಂದರ್ಭದಲ್ಲಿ ಆನೆಗಳ ಹಿಂಡನ್ನು ಮತ್ತೆ ಕಾಡಿಗೆ ಅಟ್ಟುವುದು ಸ್ವಲ್ಪ ಕಷ್ಟ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ. ಫೋಟೋ ಮದ್ದೂರು ತಾಲೂಕಿನಲ್ಲಿ ಬೆಳೆ ನಾಶ ಮಾಡುತ್ತಿರುವ ಆನೆಗಳ ಹಿಂಡು. ಸ್ಟೋರಿ : ಹಿಂದುಸ್ತಾನ ಸಮಾಚಾರ- ಕೆಆರ್‍ಕೆ-ಎಂವೈ
image