Hindusthan Samachar
Banner 2 गुरुवार, मार्च 21, 2019 | समय 06:43 Hrs(IST) Sonali Sonali Sonali Singh Bisht

ನ.14 ವರೆಗೆ ಕೃಷ್ಣಾ ಮೇಲ್ದಂಡೆ ಯೋಜನೆ ನಾಲೆಗೆ ನೀರು-ಸಚಿವ ಶಿವಾನಂದ

By HindusthanSamachar | Publish Date: Nov 10 2018 8:05PM
ನ.14 ವರೆಗೆ ಕೃಷ್ಣಾ ಮೇಲ್ದಂಡೆ ಯೋಜನೆ ನಾಲೆಗೆ ನೀರು-ಸಚಿವ ಶಿವಾನಂದ
ವಿಜಯಪುರ,ನ.10(ಹಿ.ಸ)ಕರ್ನಾಟಕದ ಜೀವನಾಡಿ ಕೃಷ್ಣಾಮೇಲ್ದಂಡೆ ಯೋಜನೆಯ ಎಲ್ಲ ಕಾಲುವೆಗಳಿಗೆ ನ.14 ರ ವರೆಗೆ ಕೃಷಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಶನಿವಾರ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ಆಮಲಟ್ಟಿಯ ಕೃಷ್ಣಾ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಜರುಗಿದ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಶಿವಾನಂದ ಪಾಟೀಲ. ಪ್ರತಿ ವರ್ಷವೂ ಒಂದು ವರ್ಷದಲ್ಲಿ ಮೂರು ಬಾರಿ ಜಲಾಶಯಗಳು ಭರ್ತಿಯಾಗುತ್ತಿದ್ದವು. ಆದರೆ ಈ ಬಾರಿ ಕೇವಲ ಒಂದೇ ಬಾರಿ ತುಂಬಿರುವದರಿಂದ ಹಾಗೂ ರಾಜ್ಯದಲ್ಲಿ ಬರಗಾಲವಿರುವದರಿಂದ ನಾರಾಯಣಪುರ ಜಲಾಶಯ ವ್ಯಾಪ್ತಿಯ ಶಾಸಕರ ಒತ್ತಡದ ಮೇರೆಗೆ ಒಂದು ಬೆಳೆಯನ್ನಾದರೂ ಪಡೆಯಲೆನ್ನುವ ಉದ್ದೇಶದಿಂದ ಬಸವಸಾಗರ ಜಲಾಶಯಕ್ಕೆ ವಾಡಿಕೆಗಿಂತ ಹೆಚ್ಚು ನೀರನ್ನು ಹರಿಸಲಾಗಿದೆ ಎಂದರು. ಮುಂಗಾರು ಹಂಗಾಮಿನಲ್ಲಿ ನಿರ್ಣಯ ಕೈಗೊಂಡಿರುವಂತೆ ನ.14 ರವರೆಗೆ ಮುಂಗಾರಿಗೆ ಎಲ್ಲ ಕಾಳುವೆಗಳಿಗೆ ನೀರು ಹರಿಸಬೇಕು. ಜಲಾಶಯಗಳಿಗೆ ಒಳಹರಿವು ಇರುವವರೆಗೂ ವಾರಾಬಂಧಿ ಪದ್ದತಿ ಇಲ್ಲದೇ ವಾರ ಪೂರ್ತಿ ರೈತರ ಜಮೀನಿಗೆ ನೀರು ಹರಿಸಲು ಎಲ್ಲ ಕಾಲುವೆಗಳಿಗೆ ನೀರು ಹರಿಸಲಾಗಿದೆ ನಂತರ ಜಲಾಶಯಕ್ಕೆ ಒಳಹರಿವು ಸ.13ರಿಂದ ಬಂದಾಗಿರುವದರಿಂದ ಅನಿವಾರ್ಯವಾಗಿ ವಾರಾಬಂದಿ ಪದ್ದತಿ ಅನುಸರಿಸಿ ಕಾಲುವೆಗಳಿಗೆ ನೀರು ಬಿಡಲಾಗಿದೆ ಎಂದು ಹೇಳಿದರು. ಪ್ರಸಕ್ತ ವರ್ಷ ನವೆಂಬರ ತಿಂಗಳಲ್ಲೇ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ಕುಸಿದಿದೆ. ಹೀಗಾಗಿ ಮಳೆಗಾಲ ಆರಂಭಕ್ಕೆ 8 ತಿಂಗಳು ಬಾಕಿ ಇದೆ. ಆದ್ದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನೀರು ಪೂರೈಕೆ ಅನಿವಾರ್ಯವಾಗಿದೆ. ಹೀಗಾಗಿ ಕೃಷ್ಣಾಮೇಲ್ದಂಡೆ ಯೋಜನೆ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ನ.14 ರ ವರೆಗೆ ಮಾತ್ರ ನೀರು ಹರಿಸಲು ಸಾಧ್ಯ ಎಂದರು. ಸಭೆಯಲ್ಲಿ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ರಾಯಚೂರು ಸಂಸದ ಬಿ.ವಿ.ನಾಯಕ, ಶಾಸಕರಾದ ಎಸ್.ಆರ್.ಪಾಟೀಲ, ಯಶವಂತರಾಯಗೌಡ ಪಾಟೀಲ, ಎ.ಎಸ್.ಪಾಟೀಲ ನಡಹಳ್ಳಿ,ದೊಡ್ಡನಗೌಡ ಪಾಟೀಲ, ದೇವಾನಂದ ಚವ್ಹಾಣ, ಶಿವನಗೌಡ ನಾಯಕ, ಬಸವರಜ ಪಾಟೀಲ ಇಟಗಿ, ಆನಂದ ನ್ಯಾಮಗೌಡ, ಹಣಮಂತ ನಿರಾಣಿ, ಸುನಿಲಗೌಡ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರು, ಕೆ.ಬಿ.ಜೆ.ಎನ್,ಎಲ್. ವ್ಯವಸ್ಥಾಪಕ ನಿರ್ದೇಶಕ ವಿ.ಶಂಕರ ಇತರರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು ಎಂದು ಮಾಹಿತಿ ನೀಡಿದರು. ಹಿಂದುಸ್ತಾನ ಸಮಾಚಾರ ಆರ್.ಜಿ.ಕೆ. ಯ.ಮ.
लोकप्रिय खबरें
फोटो और वीडियो गैलरी
image