Hindusthan Samachar
Banner 2 रविवार, नवम्बर 18, 2018 | समय 06:49 Hrs(IST) Sonali Sonali Sonali Singh Bisht

ಮೂರ್ತಿ ಮೆರವಣಿಗೆ

By HindusthanSamachar | Publish Date: Nov 10 2018 7:47PM
ಮೂರ್ತಿ ಮೆರವಣಿಗೆ
ಕೊಪ್ಪಳ ನ. ೧೦(ಹಿ.ಸ)-ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ಕುರುಹಿನಶೆಟ್ಟಿ ಸಮಾಜದ ವತಿಯಿಂದ ಶರಣ ಸಮಗಂಡಿ ಮಲ್ಲಯ್ಯತಾತನ ಮೂರ್ತಿ ಮೆರವಣಿಗೆ ಶನಿವಾರ ನಡೆಯಿತು. ೧೬ನೇ ವಾರ್ಡಿನ ಈಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಪ್ರಮುಖ ರಾಜಬೀದಿಯ ಮೂಲಕ ಕನಕಾಚಲಪತಿ ದೇವಸ್ಥಾನ, ಬಸ್‌ನಿಲ್ದಾಣ, ವಾಲ್ಮೀಕಿ ವೃತ್ತ ಮಾರ್ಗವಾಗಿ ಎಪಿಎಂಸಿ ಕಚೇರಿ ಬಳಿ ಇರುವ ಮಲ್ಲಯ್ಯತಾತನ ವೃತ್ತದವರೆಗೂ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕಳಷವಿಡಿದು ಭಾಗವಹಿಸಿದ್ದರು. ತಾಷಾ ಮೇಳಕ್ಕೆ ಹೆಜ್ಜೆ ಹಾಕಿದ ಯುವಕರು ಸಂಭ್ರಮದಿಂದ ಮೆರವಣಿಗೆಯನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಬಸಣ್ಣ ಸಮಗಂಡಿ, ಗಂಗಣ್ಣ ಸಮಗಂಡಿ, ಅಮರೇಶ ಸಮಗಂಡಿ, ಮರಿಮಲ್ಲಪ್ಪ ಆಸಾಪೂರ, ನಿಂಗಪ್ಪ ಯಲಬುರ್ಗಿ, ವಿರೇಶ ಸಮಗಂಡಿ, ವಿರೇಶಪ್ಪ ಖಾನಾವಳಿ, ಮಂಜುನಾಥ, ಗಂಗಾಧರ ಸೇರಿದಂತೆ ಇತರರು ಇದ್ದರು. \
image