Hindusthan Samachar
Banner 2 बुधवार, जनवरी 23, 2019 | समय 21:04 Hrs(IST) Sonali Sonali Sonali Singh Bisht

ಮಾನವೀಯತೆ ಮೆರೆದ ಮೃತ ವಿದ್ಯಾರ್ಥಿನಿ ಪೋಷಕರು

By HindusthanSamachar | Publish Date: Nov 10 2018 7:49PM
ಮಾನವೀಯತೆ ಮೆರೆದ ಮೃತ ವಿದ್ಯಾರ್ಥಿನಿ ಪೋಷಕರು
ಶಿವಮೊಗ್ಗ, ನ.10 (ಹಿಗಳ ಅಗಲಿಕೆಯ ದುಃಖದಲ್ಲೂ ಮಾನವೀಯತೆ ಮೆರೆದ ಕುಟುಂಬ. ಅಂಗಾಂಗ ದಾನ ಮಾಡಿ ಮಾದರಿಯಾದ ತಂದೆ, ತಾಯಿ.ಚಿಕ್ಕಮಗಳೂರಿನ ಎನ್.ಆರ್.ಪುರದಲ್ಲಿ ಭದ್ರಾವತಿ ಶಾಲೆಯ ಮಕ್ಕಳಿದ್ದ ಬಸ್, ಬೆಳಗ್ಗೆ ಪಲ್ಟಿಯಾಗಿತ್ತು. ವಿದ್ಯಾರ್ಥಿನಿ ದಿಯಾ (16) ಗಂಭೀರ ಗಾಯಗೊಂಡು, ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಮಗಳ ಅಗಲಿಕೆಯ ನೋವಿನಲ್ಲೂ, ಪೋಷಕರು ದಿಯಾಳ ಕಣ್ಣುಗಳನ್ನು ಶಂಕರ್ ಕಣ್ಣಿನ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಇತರೆ ಅಂಗಾಂಗಗಳನ್ನು ಕೂಡ ದಾನ ಮಾಡಿ, ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದಾರೆ. ಭದ್ರಾವತಿಯಲ್ಲಿ ನೆಲೆಸಿರುವ ನಿವೃತ್ತ ಸೇನಾಧಿಕಾರಿ ಕರ್ನಲ್ ರಾಜೇಂದ್ರ ಸಿಂಗ್ ಶೇರಾವತ್ ಅವರ ಮಗಳು ದಿಯಾ, ಪೂರ್ಣಪ್ರಜ್ಞಾ ಶಾಲೆಯಲ್ಲಿ ಓದುತ್ತಿದ್ದಳು. ಶಾಲೆಯಿಂದ ಇವತ್ತು ಶೃಂಗೇರಿಗೆ ಪ್ರವಾಸ ಏರ್ಪಡಿಸಲಾಗಿತ್ತು. ಎನ್.ಆರ್.ಪುರ ತಾಲೂಕಿನ ಸೌತಿಕೆರೆ ಬಳಿ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಿಯಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಳು. ಹಿಂದೂಸ್ತಾನ ಸಮಾಚಾರ/ಕೆಆರ್’ಎನ್/ಯ.ಮ
image