Hindusthan Samachar
Banner 2 सोमवार, नवम्बर 19, 2018 | समय 00:35 Hrs(IST) Sonali Sonali Sonali Singh Bisht

'ಸಿದ್ದರಾಮಯ್ಯ ಸ್ವಯಂ ಘೋಷಿತ `ಂಡ ಅಹಿಂದ ರಾಜಕಾರಣಿ'

By HindusthanSamachar | Publish Date: Nov 10 2018 7:51PM
'ಸಿದ್ದರಾಮಯ್ಯ ಸ್ವಯಂ ಘೋಷಿತ `ಂಡ ಅಹಿಂದ ರಾಜಕಾರಣಿ'
ಗದಗ, ನ.10 (ಹಿ.ಸ)-ಮಂ ಸಿದ್ದರಾಮಯ್ಯ ಸ್ವಯಂ ಘೋಷಿತ `ಂಡ ಅಹಿಂದ ರಾಜಕಾರಣಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಶನಿವಾರ ನಗರದ ತೋಂಟದಾರ್ಯ ಮಠಕ್ಕೆ `ೇಟಿ ನೀಡಿದ ಸಂದರ್`ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ಮೂಲಕ ಹಿಂದೂ-ಮುಸ್ಲಿಂ ನಡುವೆ ಜಗಳ ಹಚ್ಚುವ ಕೆಲಸ ಮಾಡಿದ್ದಾರೆ. ಟಿಪ್ಪು ಜಯಂತಿ ಮೂಲಕ ರಾಜಕೀಯ ಲಾ` ಪಡೆಯಲು ಯತ್ನಿಸಿದ ಸಿದ್ದರಾಮಯ್ಯ ಅಕಾರ ಕಳೆದುಕೊಳ್ಳಬೇಕಾಯಿತು ಎಂದು ಟೀಕಿಸಿದರು. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಿಂ`ೂರ ಲಕ್ಷ್ಮಣ ಅವರಂಥ ಸ್ವಾತಂತ್ರ್ಯ ಹೋರಾಟಗಾರರ ಜೊತೆ ಟಿಪ್ಪು ಸುಲ್ತಾನ್ ಹೋಲಿಕೆ ಮಾಡುವ ಕೀಳುಮಟ್ಟಕ್ಕೆ ಸಿದ್ದರಾಮಯ್ಯ ಇಳಿದಿದ್ದಾರೆ. ಆ ಮೂಲಕ ಅಕಾರ ಕಳೆದುಕೊಂಡರೂ ಸಿದ್ದರಾಮಯ್ಯ ಬುದ್ದಿ ಕಲಿತಿಲ್ಲ. ಸಿದ್ದರಾಮಯ್ಯ ಅವರ ಈ ಬಂಡವಾಳ ಅರಿತಿದ್ದರಿಂದ ಚಾಮುಂಡೇಶ್ವರಿ ಕ್ಷೇತ್ರದ ಜನ ಅಲ್ಲಿಂದ ಓಡಿಸಿದರು. ಪಾಪ ಬಾದಾಮಿ ಜನರಿಗೆ ಇದೆಲ್ಲ ಗೊತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದ್ದಾರೆ. ಆದರೆ ಮುಂದೊಂದು ದಿನ ಸಿದ್ದರಾಮಯ್ಯ ಅವರನ್ನು ಸೋಲಿಸಲಿದ್ದಾರೆ ಎಂದು `ವಿಷ್ಯ ನುಡಿದರು. ಸಚಿವ ಈಶ್ವರಪ್ಪ ವಿರುದ್ಧ ಕಿಡಿ ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ಲಾಟರಿಯಿಂದ ಮುಖ್ಯಮಂತ್ರಿ, ಸಚಿವರಾದವರು ಎಂದು ಕಟುಕಿದ ಈಶ್ವರಪ್ಪ, ಕೊಡಗಿನಲ್ಲಿ ಕುಟ್ಟಪ್ಪ ಸಾವಿನ ಸಂದರ್`ದಲ್ಲಿ, ನಾನು ಮುಖ್ಯಮಂತ್ರಿ ಆದರೆ ಟಿಪ್ಪು ಸುಲ್ತಾನ್ ಜಯಂತಿ ಮಾಡಲ್ಲ ಎಂದಿದ್ದ ಕುಮಾರಸ್ವಾಮಿ ಈಗ ತಮ್ಮ ಮಾತು ಮರೆತಿದ್ದಾರೆ. ಈ ಬಗ್ಗೆ ಸಚಿವ ರೇವಣ್ಣ ಅವರೇ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಬೇಕು. ಅಲ್ಲದೇ ಕುಮಾರಸ್ವಾಮಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. 15ರಂದು ಸಭೆ ನಾವು ರೈತ ಪರ ಎಂದು ಹೇಳಿಕೊಳ್ಳು ಜೆಡಿಎಸ್- ಕಾಂಗ್ರೆಸ್ ಸರಕಾರ, ಮಹದಾಯಿ ನ್ಯಾಯಾಕರ ತೀಪರ್ು ಪ್ರಕಟಗೊಂಡು ಇಷ್ಟು ದಿನ ಕಳೆದರು ಸರಕಾರ ಒಂದು ಹೆಜ್ಜೆ ಮುಂದಿಟ್ಟಿಲ್ಲ. ರೈತರ ಸಾಲ ಮನ್ನಾ, ಬರಗಾಲ ಘೋಷಣೆಗೆ ಸೀಮಿತವಾಗಿರುವ ಸರಕಾರ, ಬ್ಯಾಂಕುಗಳಿಂದ ರೈತರ ಸಚರ್್ ವಾರೆಂಟ್ ಜಾರಿಯಾಗುತಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎಲ್ಲ ಜ್ವಲಂತ ಸಮಸ್ಯೆಗಳ ಬಗ್ಗೆ ಚಚರ್ೆ ನಡೆಸಲು ಇದೇ 15ರಂದು ಬಿಜೆಪಿ ನಾಯಕರು ಸ`ೆ ಸೇರಿ, ಚಚರ್ಿಸಲಿದ್ದಾರೆ ಎಂದು ತಿಳಿಸಿದರು. ಹಿಂದೂಸ್ಥಾನ ಸಮಾಚಾರ/ಜೆ.ಬಿ./ಯ.ಮ
image