Hindusthan Samachar
Banner 2 शुक्रवार, नवम्बर 16, 2018 | समय 23:33 Hrs(IST) Sonali Sonali Sonali Singh Bisht

ಶಹಾಪುರ ತಾಲುಕಾ ಆಡಳಿತದಿಂದ ಟಿಪ್ಪು ಜಯಂತಿ

By HindusthanSamachar | Publish Date: Nov 10 2018 7:45PM
ಶಹಾಪುರ ತಾಲುಕಾ ಆಡಳಿತದಿಂದ  ಟಿಪ್ಪು ಜಯಂತಿ
ಯಾದಗಿರಿ ನ, 10. ( ಹಿ.ಸ. ) - ಮೈಸೂರಿನ ಹುಲಿ ಎಂದೆ ಖ್ಯಾತಿ ಪಡೆದ ಟಿಪ್ಪು ಸುಲ್ತಾನರು ಬ್ರೀಟಿಷರ ವಿರುದ್ದ ಹೋರಾಟ ಮಾಡುವದರ ಮುಖಾಂತರ ದೇಶದಲ್ಲಿನ ಪ್ರಾಂತೀಯ ಅನಿಷ್ಟ ಪದ್ದತಿಗಳ ತಡೆಗಾಗಿ ಅನೇಕ ಹೋರಾಟಗಳನ್ನು ಮಾಡಿದವರು. ಅವರ ಸಂದೇಶಗಳನ್ನು ಅರ್ಥೈಹಿಸಕೊಂಡಲ್ಲಿ ಜಯಂತಿ ಆಚರಣೆಗಳು ಸಾರ್ಥಕವಾಗುತ್ತವೆ ಎಂದು ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಅಭಿಪ್ರಾಯಪಟ್ಟರು.ಶಹಾಪೂರ ನಗರದ ನಗರಸಭೆ ಅವರಣದಲ್ಲಿ ತಾಲುಕಾ ಆಡಳಿತ ಆಶ್ರಯದಲ್ಲಿ ಹಮ್ಮಿಕೊಂಡ ಟಿಪ್ಪು ಜಯಂತಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು, ಇಂದು ಟಿಪ್ಪು ಅವರ ಇತಿಹಾಸ ತಿರುಚುವ ಕಾರ್ಯ ನಡೆಯುತ್ತಿದೆ, ಅವರು ಅಧಿಕಾರದ ಸಂಸ್ಥಾನದಲ್ಲಿ ಹೆಚ್ಚು ಯುದ್ದ ಸಮರಗಳು ನಡೆದು ಅಲ್ಲಿಯ ಪ್ರಜೆಗಳ ಹಿತವನ್ನು ಕಾಪಾಡುವದರ ಮುಖಾಂತರ ಸಾಮ್ರಾಜ್ಯವನ್ನು ವಿಸ್ತರಿಸಿದರು. ಮೈಸೂರಿನ ಹುಲಿ ಎಂದು ಹೆಸರು ಗಳಿಸಿದರು. ಎರಡು ನೂರು ವರ್ಷಗಳ ಹಿಂದಿನ ನೆನಪುಗಳು ಇಂದು ಸಮಾಜಕ್ಕೆ ಪ್ರೇರಣೆಯಾಗಬೇಕಿದೆ ಎಂದರು. ವಿಶೇಷ ಉಪನ್ಯಾಷಕರಾಗಿ ಆಗಮಿಸಿದ್ದ ಕಲಬುರ್ಗಿಎಸ್‌ಬಿ ಕಾಲೇಜಿನಉಪನ್ಯಾಷಕರಾದ ಸಾಹಿತಿ ಡಾ, ಲಕ್ಷ್ಮಣ ಅವಟೆ ಮಾತನಾಡಿ, ಇಂದು ಪ್ರತಿಯೊಂದು ಬದುಕಿನ ವ್ಯವಸ್ಥೆ ಬಂಧನದ ಬೇಸುಗೆಯಾಗಿದೆ, ಮಂದಿರ , ಮಸೀದಿ ಎನ್ನುವ ಮೌಡ್ಯತೆಯಲ್ಲಿ ಲೀನವಾಗಿದೆ. ನಮ್ನಗಳ ಸ್ವತ್ಯಂತ್ರ್ಯಗಳು ದಿಕ್ಕು ಪಾಲಾಗಿವೆ. ಎಂದರು. ಅಂದು ಜಾತಿ ಪದ್ದತಿ ಹಾಗೂ ಮನುಷ್ಯನ ನಿರ್ಮಿತಗೊಂಡ ಜಾತಿ ಧರ್ಮಗಳನ್ನು ಬೇಧಿಸಿದ ಧೀಮಂತ ನಾಯಕ ಟಿಪ್ಪು ಸುಲ್ತಾನ ಅವರ ಆದರ್ಶಗಳು ಇಂದು ಪ್ರತಿ ಸಮಾಜಕ್ಕೆ ಮಾದರಿಯಾಗಲಿ ಎಂದರು, ವೇದಿಕೆಯಲ್ಲಿ ಪೌರಾಯುಕ್ತ ಬಸವರಾಜ ಶಿವಪೂಜೆ , ತಹಿಸಲ್ದಾರ ಸಂಗಮೇಶ ಜಿಡಗೆ, ಟಿಪ್ಪು ಸುಲ್ತಾನ ಸಮಿತಿ ಅಧ್ಯಕ್ಷ ಸೈಯದುದ್ದಿನ ಖಾದ್ರಿ ಸಿಪಿಐ ನಾಗರಾಜ ಜೆ. ಉಪಸ್ಥಿತರಿದ್ದರು. ಸಮಾರಂಭದಲ್ಲಿ ದಲಿತ ಮುಖಂಡರಾದ ನೀಲಕಂಠ ಬಡಿಗೇರ, ಸಣ್ಣ ನಿಂಗಣ್ಣ ನಾಯಕೊಡಿ, ಮಾಹಾದೇವಪ್ಪ ಸಾಲಿಮನಿ, ನಗರಸಭೆ ಸದಸ್ಯರಾದ ವಸಂತ ಸುಪುರಕರ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸೈಯದ್ ಇಸಾಕ ಹುಸೇನಿ , ಕಾಲೀದ್‌ಅಲ್ಲಾ ಪಟೇಲ ಮಕ್ತಾಪುರ, ಶಿವಪುತ್ರ ಜವಳಿ, ಶಿವಕುಮಾರ ತಳವಾರ,ಜೆಟ್ಟೆಪ್ಪ ಕೆಂಭಾವಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು . ಜಯಂತಿಯನ್ನು ಕಾಟಾಚಾರಕ್ಕೆ ಆಚರಣೆ ಮಾಡಲಾಗುತ್ತಿದ್ದು,ಬಹುತೇಕ ಸರ್ಕಾರಿ ಅಧಿಕಾರಿಗಳು ಗೈರು ಹಾಜರಿಯಾಗಿದ್ದಾರೆ ಎಂದು ಟಿಪ್ಪು ಸುಲ್ತಾನ ಸಮಿತಿ ಮುಖಂಡರಾದ ಸೈಯದುದಿನ್ ಖಾದ್ರಿ ಅವರು ತಹಸಿಲ್ದಾರ್ ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. ಗೈರು ಹಾಜರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುತ್ತದೆ, ಈ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಸೀಲ್ದಾರ ಸಂಗಮೇಶ ಜಿಡಗೆ ತಿಳಿಸಿದರು. ಹಿಂದುಸ್ಥಾನ ಸಮಾಚಾರ / ಬಿಎಂಜೆ / ಯ.ಮ.
image