Hindusthan Samachar
Banner 2 शनिवार, नवम्बर 17, 2018 | समय 00:22 Hrs(IST) Sonali Sonali Sonali Singh Bisht

ಕಾಯಕಲ್ಪಕ್ಕೆ ಕಾದಿವೆ ಮು‘ೋಳ ದೇಗುಲಗಳು

By HindusthanSamachar | Publish Date: Nov 10 2018 7:46PM
ಕಾಯಕಲ್ಪಕ್ಕೆ ಕಾದಿವೆ ಮು‘ೋಳ ದೇಗುಲಗಳು
ಕೊಪ್ಪಳ ನ.೧೦(ಹಿ.ಸ)-ಕರ್ನಾಟಕದಲ್ಲಿ ಕಲಾವಂತಿಕೆಗೆ ಹೆಸರಾದ ಅನೇಕ ಶಿಲ್ಪಾಕಲಾ ದೇಗುಲಗಳಿವೆ. ಆದರೆ, ಕೆಲವು ದೇಗುಲಗಳು ಮಾತ್ರ ಬೆಳಕಿಗೆ ಬಂದಿಲ್ಲ. ಅಲ್ಲದೆ ಜನರ ಗಮನಕ್ಕೆ, ಪ್ರವಾಸಿಗರ ನೋಟಕ್ಕೂ ಸಿಗದೆ ಅಜ್ಞಾತ ದೇವಾಲಯಗಳು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಸಾಕಷ್ಟಿವೆ. ಅವುಗಳಲ್ಲಿ ಮು‘ೋಳದ ದೇವಾಲಯಗಳು ಪ್ರಮುಖವಾಗಿವೆ. ಇಲ್ಲಿನ ದೇಗುಲಗಳು ರಕ್ಷಣೆಗಾಗಿ ದಿನವಿಡಿ ಮೊರೆಯಿಡುತ್ತಿದೆ. ತಾಲೂಕು ಕೇಂದ್ರದಿಂದ ಕೇವಲ ಏಳು ಕಿಮೀ ಅಂತರದಲ್ಲಿರುವ ಮು‘ೋಳ ಗ್ರಾಮ ಐತಿಹಾಸಿಕತೆಯಿಂದ ಸಾಕಷ್ಟು ಹೆಸರು ಪಡೆದಿದ್ದರೂ ಸರ್ಕಾರದ ಮತ್ತು ಸ್ಥಳಿಯ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಮು‘ೋಳ ಗ್ರಾಮವು ಐತಿಹಾಸಿಕದ ಶಿಲ್ಪಕಲೆಗಳಿಂದ ಸಾಕಷ್ಟು ಹೆಸರು ಪಡೆದುಕೊಂಡ ಇಲ್ಲಿಯ ತ್ರಿಲಿಂಗೇಶ್ವರ ದೇವಸ್ಥಾನವು ಕಲ್ಯಾಣಿ ಚಾಲುಕ್ಯರ ಶೈಲಿಯ ಈ ಪುರಾತನ ದೇಗುಲವು ಅತ್ಯಾಕರ್ಷಣೆಯಿಂದ ಕೂಡಿದೆ. ಇದು ೧೧ನೇ ಶತಮಾನದ ಮ‘್ಯೆಕಾಲಿನ ರಚನೆಯಾಗಿದೆ. ಕಲ್ಯಾಣಿ ಚಾಲುಕ್ಯರ ದೊರೆ ತ್ರೈಲೋಕ್ಯಮಲ್ಲದೇವನ ದಂಡನಾಯಕ ಸೋಮರಸನ ಪತ್ನಿ ಬರ್ಮಲದೇವಿ ದೇಗುಲವನ್ನು ನಿರ್ಮಿಸಿದ್ದಾರೆ ಎಂದು ತಿಳಿದು ಬರುತ್ತದೆ. ರಕ್ಷಣೆಗೆ ಕಾದಿರುವ ದೇಗುಲಗಳು: ಗ್ರಾಮದ ಅನೇಕ ದೇಗುಲಗಳ ಪೈಕಿ ಮಲ್ಲಿಕಾರ್ಜುನ ದೇವಾಲಯವು ಗ್ರಾಮದ ದಕ್ಷಿಣಕ್ಕೆ ಇದೆ. ಕ್ರಿಶ ೧೨ನೇ ಶತಮಾನದ ಮ‘್ಯ ಕಾಲದಲ್ಲಿ ನಿರ್ಮಾಣವಾಗಿರುವ ಈ ದೇಗುಲವು ಈಗ ಅನಾಥವಾಗಿದೆ. ಅಲ್ಲದೇ ದೇಗುಲದ ಹತ್ತಿರವಿರುವ ವೀರಗಲ್ಲು ತನ್ನ ಇತಿಹಾಸ ಸಾರುತ್ತಿದೆ. ಆದರೆ, ಈ ವೀರಗಲ್ಲು ಮಾತ್ರ ತನ್ನ ಕಳೆ ಕಳೆದುಕೊಳ್ಳುತ್ತಿದೆ. ವೀರಗಲ್ಲಿನ ಮ‘್ಯೆ ಬಿರುಕು ಬಿಟ್ಟಿದ್ದು, ಅದು ಸಹ ಅವನತಿಯತ್ತ ಸಾಗಿದೆ. ಮತ್ತೊಂದು ಐತಿಹಾಸಿಕ ಶಿಲ್ಪಕಲಾ ರಚನೆಯಿಂದ ಇಂದಿಗೂ ಕಂಗೊಳಿಸುತ್ತಿರುವ ಕಾಡಸಿದ್ದೇಶ್ವರ ದೇಗುಲವು ನೋಡಲು ಸುಂದರವಾಗಿದ್ದರೂ ಅದರ ರಕ್ಷಣೆ ಮಾತ್ರ ಇಂದಿಗೂ ಮಾಡಿಲ್ಲ. ಎಲೆಮರೆ ಕಾಯಿಯಂತಿರುವ ಈ ದೇಗುಲಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ಅನಾಥವಾಗಿ ದಿನದಿಂದ ದಿನಕ್ಕೆ ತನ್ನ ರೂಪವನ್ನು ಕಳೆದುಕೊಳ್ಳುತ್ತಿದೆ. ಈ ದೇಗುಲದ ಸುತ್ತ ಮುಳ್ಳು ಕಂಟಿಗಳು ಬೆಳೆದು ಬೆಟ್ಟದಂತೆ ತಿಪ್ಪೆ ಗುಂಡಿಗಳು ದೇಗುಲದ ಸುತ್ತ ನಿರ್ಮಾಣವಾಗಿದೆ. ದೇಗುಲವು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಲ್ಲಿನಲ್ಲಿ ಕೆತ್ತಿರುವ ಶಿಲ್ಪಕಲೆಗಳು, ಮೂರ್ತಿಗಳು ಮಣ್ಣಲ್ಲಿ ಮುಚ್ಚಿಕೊಂಡಿದೆ. ಅಲ್ಲದೇ ಈ ದೇಗುಲದ ಮುಂದೆ ಈಗ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸುವುದು ಮತ್ತು ಎಮ್ಮೆ, ದನಕರುಗಳನ್ನು ಕಟ್ಟುವ ಮೂಲಕ ಪ್ರದೇಶವನ್ನು ಹಾಳಾಗುತ್ತಿದೆ. ಈ ದೇಗುಲವನ್ನು ಸಂರಕ್ಷಿಸಬೇಕಾದವರ ನಿರ್ಲಕ್ಷ್ಯತನದಿಂದ ಅವನತಿಯತ್ತ ಸಾಗಿದೆ. ಅಲ್ಲದೆ ರಕ್ಷಣೆಗಾಗಿ ಮೊರೆಯಿಡುತ್ತಿದೆ ಮು‘ೋಳದ ದೇಗುಲಗಳು. ಹಿಂದುಸ್ಥಾನ ಸಮಾಚಾರ ಯ.ಮ/ಎನ್.ಬಿ
image