Hindusthan Samachar
Banner 2 बुधवार, सितम्बर 26, 2018 | समय 15:08 Hrs(IST) Sonali Sonali Sonali Singh Bisht

ಹಿರಿಯ ಕಾಂಗ್ರೆಸ್ಸಿಗ ಶಂಕರ್ ಸಿಂಗ್ ವಘೇಲಾ ಪುತ್ರ ಮಹೇಂದ್ರ ಸಿಂಗ್ ಬಿಜೆಪಿಗೆ ಸೇರ್ಪಡೆ

By HindusthanSamachar | Publish Date: Jul 14 2018 1:31PM
ಹಿರಿಯ ಕಾಂಗ್ರೆಸ್ಸಿಗ ಶಂಕರ್ ಸಿಂಗ್ ವಘೇಲಾ ಪುತ್ರ ಮಹೇಂದ್ರ ಸಿಂಗ್ ಬಿಜೆಪಿಗೆ ಸೇರ್ಪಡೆ
ಅಹಮದಾಬಾದ್, ಜು.14 ( ಗುಜರಾತ್ ಕಾಂಗ್ರೆಸ್ ಗೆ ಭಾರಿ ಹಿನ್ನಡೆಯಾಗಿದೆ, ಕಾಂಗ್ರೆಸ್ ಮಾಜಿ ಶಾಸಕ ಶಂಕರ್ ಸಿಂಗ್ ವಘೇಲಾ ಅವರ ಪುತ್ರ ಮಹೇಂದ್ರಸಿಂಗ್ ವಘೇಲಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. 2012 ರಲ್ಲಿ ಉತ್ತರ ಗುಜರಾತ್ ನ ಬಯಾದ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ.ಮತ್ತೆ 2017 ರ ಚುನಾವಣೆಯಲ್ಲಿ ಸ್ಪರ್ದಿಸಲು ನಿರಾಕರಿಸಿದ್ದರು. ಗುಜರಾತ್ ಬಿಜೆಪಿ ಮುಖ್ಯಸ್ಥ ಜಿತುಬಾಯಿ ವಘಾನಿ ಈ ವಿಷಯ ಪ್ರಕಟಿಸಿದ್ದಾರೆ,ಕಳೆದ 15 ದಿನಗಳ ಹಿಂದೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಶಾಸಕ ಕುನ್ವರ್ಜಿ ಭವಾಲಿಯಾ ಕಾಂಗ್ರೆಸ್ ಗೆ ರಾಜಿನಾಮೆ ನೀಡಿದ್ದರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಭವಾಲಿಯರನ್ನು ಕೂಡಲೇ ಸಚಿವರಾಗಿ ನೇಮಿಸಲಾಯಿತು. ಈಗ ಅವರ ಹಾಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಹಿಂದೂಸ್ತಾನ ಸಮಾಚಾರ/ಎಂ.ಎಸ್/ ಯ.ಮ
image