Hindusthan Samachar
Banner 2 गुरुवार, जुलाई 19, 2018 | समय 11:34 Hrs(IST) Sonali Sonali Sonali Singh Bisht

ಪ್ರೀತಿಸಿದವನೊಂದಿಗೆ ಮದುವೆ ಮಾಡಿಸುವಂತೆ ಆಗ್ರಹಿಸಿ ಮೊಬೈಲ್ ಟವರ್ ಹತ್ತಿ ಪ್ರತಿಭಟನೆ ನಡೆಸಿದ ಹುಡುಗಿ

By HindusthanSamachar | Publish Date: Jul 14 2018 1:31PM
ಪ್ರೀತಿಸಿದವನೊಂದಿಗೆ ಮದುವೆ ಮಾಡಿಸುವಂತೆ ಆಗ್ರಹಿಸಿ ಮೊಬೈಲ್ ಟವರ್ ಹತ್ತಿ ಪ್ರತಿಭಟನೆ ನಡೆಸಿದ ಹುಡುಗಿ
ಹೈದರಾಬಾದ್​, ಜು.14 - ತಾನು ಪ್ರೀತಿಸಿದ ಹುಡುಗನೊಂದಿಗೆ ಮದುವೆ ಮಾಡಿಸುವಂತೆ ಆಗ್ರಹಿಸಿ ಹುಡುಗಿಯೊಬ್ಬಳು ಮೊಬೈಲ್​ ಟವರ್​ ಹತ್ತಿ ಪ್ರತಿಭಟನೆ ನಡೆಸಿರುವ ಘಟನೆ ತೆಲಂಗಾಣದ ಯಾದದ್ರಿ ಭೋಂಗೀರ್ ಜಿಲ್ಲೆಯ ವಲ್ಲಿಗಂಡ ಗ್ರಾಮದಲ್ಲಿ ನಡೆದಿದೆ. ಪೊಲೀಸರು ತಿಳಿಸಿರುವ ಪ್ರಕಾರ ಶೃತಿ (ಹೆಸರು ಬದಲಾಯಿಸಲಾಗಿದೆ). ಇವಳು ಕಳೆದ ಏಳು ವರ್ಷಗಳಿಂದ ಭಾಸ್ಕರ್​ ಎಂಬ ಯುವಕನೊಂದಿಗೆ ಪ್ರೀತಿ ಮಾಡುತ್ತಿದ್ದರಂತೆ. ಆದರೆ, ಕಳೆದ ಕೆಲ ದಿನಗಳಿಂದ ಈತ ಶೃತಿಯನ್ನ ನಿರಾಕರಿಸಿ ಬೇರೊಬ್ಬ ಯುವತಿಯೊಂದಿಗೆ ಸಂಬಂಧ ಬೆಳೆಸಿದ್ದನು ಎಂದು ಆರೋಪಿಸಿದ್ದಾಳೆ. ಭಾಸ್ಕರ್​ನಿಗಾಗಿ ನಾನೂ ಸಾಪ್ಟ್​ವೇರ್​ ಕಂಪನಿ ಕೆಲಸ ಬಿಟ್ಟಿದ್ದು, ಆತನೊಂದಿಗೆ ನಾನು ಮದುವೆಯಾಗಬೇಕು ಎಂದು ಆಗ್ರಹಿಸಿ ಇಂದು ಮೊಬೈಲ್​ ಟವರ್​ ಏರಿದ್ದಾಳೆ. ಆಕೆಯನ್ನ ಕೆಳಗೆ ಇಳಿಸಲು ಪೊಲೀಸರು ಬರೋಬ್ಬರಿ ಮೂರು ಗಂಟೆಗಳ ಕಾಲ ಹರಸಾಹಸ ಪಟ್ಟಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ತಾವೂ ವಿಚಾರಣೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಆಕೆ ಕೆಳಗೆ ಇಳಿದು ಬಂದಿದ್ದಾಳೆ ಎಂದು ತಿಳಿದು ಬಂದಿದೆ. ಶೃತಿ ಟವರ್​ ಹತ್ತಿ ಪ್ರತಿಭಟನೆ ಮಾಡುವುದಕ್ಕೂ ಮೊದಲು ಭಾಸ್ಕರ್​ ಮನೆಯ ಮುಂದೆ ಮೂರು ದಿನಗಳ ಕಾಲ ಕುಳಿತಿದ್ದಳು. ಆದರೆ ಅವರು ಮನೆ ಲಾಕ್​ ಮಾಡಿಕೊಂಡು ಬೇರೆಡೆ ಹೋಗಿದ್ದರು ಎಂದು ತಿಳಿಸಿದ್ದಾಳೆ. ಹಿಂದೂಸ್ತಾನ ಸಮಾಚಾರ/ಎಂ.ಎಸ್/ ಯ.ಮ
image