Hindusthan Samachar
Banner 2 रविवार, नवम्बर 18, 2018 | समय 13:39 Hrs(IST) Sonali Sonali Sonali Singh Bisht

ಹಿಂದೂ-ಪಾಕಿಸ್ತಾನ ಹೇಳಿಕೆ ನೀಡಿದ ಸಂಸದ ಶಶಿತರೂರ್ ಗೆ ಕೊಲ್ಕತ್ತಾ ಹೈಕೋರ್ಟ್ ನಿಂದ ಸಮನ್ಸ್

By HindusthanSamachar | Publish Date: Jul 14 2018 12:20PM
ಹಿಂದೂ-ಪಾಕಿಸ್ತಾನ ಹೇಳಿಕೆ ನೀಡಿದ ಸಂಸದ ಶಶಿತರೂರ್ ಗೆ ಕೊಲ್ಕತ್ತಾ ಹೈಕೋರ್ಟ್ ನಿಂದ ಸಮನ್ಸ್
ಕೊಲ್ಕತ್ತಾ, ಜು.14 ( ಹಿಂದೂ-ಪಾಕಿಸ್ತಾನ ಹೇಳಿಕೆ ಸಂಬಂಧ ಕೊಲ್ಕತ್ತಾ ಹೈಕೋರ್ಟ್ ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ಸಮನ್ಸ್ ನೀಡಿದೆ. ಕೊಲ್ಕತ್ತಾ ಮೂಲದ ವಕೀಲ ಸುಮೀತ್ ಚೌಧುರಿ ಸಲ್ಲಿಸಿದ ತಮ್ಮ ಅರ್ಜಿಯಲ್ಲಿ, ತರೂರ್ ಅವರು ತಮ್ಮ ಹೇಳಿಕೆ ಮೂಲಕ ದೇಶದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದರೊಂದಿಗೆ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಇದರಿಂದ ದೇಶದಲ್ಲಿ ಘರ್ಷಣೆ ಹಾಗು ಸಾಮರಸ್ಯ ಕೊರತೆಯುಂಟಾಗಿ ಧರ್ಮ ಒಡೆಯಲು ಕಾರಣವಾಗಿದೆ ಎಂದು ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 153 ಮತ್ತು 295 ಎ ಅಡಿಯಲ್ಲಿ ದೂರು ದಾಖಲಾಗಿದ್ದು, ಆಗಸ್ಟ್ 14 ರೊಳಗೆ ಕೋರ್ಟ್ ಗೆ ಹಾಜರಾಗುವಂತೆ ಸೂಚಿಸಲಾಗಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಗೆದ್ದರೇ ಭಾರತ ಹಿಂದೂ ಪಾಕಿಸ್ತಾನ ವಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಹಿಂದೂಸ್ತಾನ್ ಸಮಾಚಾರ/ಎಂ.ಎಸ್/ ಯ.ಮ
image