Hindusthan Samachar
Banner 2 बुधवार, सितम्बर 26, 2018 | समय 02:59 Hrs(IST) Sonali Sonali Sonali Singh Bisht

ಮಕ್ಕಳ ಕಳ್ಳರೆಂದು ವದಂತಿ ಹಬ್ಬಿಸಿದ್ದ ವಾಟ್ಸ್ ಅಪ್ ಗ್ರೂಪ್ ಅಡ್ಮಿನ್ ಒಬ್ಬನ ಬಂಧನ

By HindusthanSamachar | Publish Date: Jul 14 2018 12:21PM
ಮಕ್ಕಳ ಕಳ್ಳರೆಂದು ವದಂತಿ ಹಬ್ಬಿಸಿದ್ದ ವಾಟ್ಸ್ ಅಪ್ ಗ್ರೂಪ್ ಅಡ್ಮಿನ್ ಒಬ್ಬನ ಬಂಧನ
ಬೀದರ್,ಜು.14(ಹಿ.ಸ) ಲೆಯ ಮುರ್ಕಿ ಗ್ರಾಮದಲ್ಲಿ ಮಕ್ಕಳ ಕಳ್ಳರೆಂದು ಸುಳ್ಳು ವದಂತಿ ಹರಡಿಸಿ ಸಾವಿರಾರು ಜನ ಸೇರುವಂತೆ ಮಾಡಿದ್ದ ವಾಟ್ಸ್ ಆಪ್ ಗ್ರೂಪ್ ಅಡ್ಮಿನ್​ಗಳ ಪೈಕಿ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮದರ್ ಮುರ್ಕಿ ಎಂಬ ವಾಟ್ಸ್ ಆಪ್ ಗ್ರೂಪ್ ಅಡ್ಮಿನ ಮನೋಜ್ ಎಂಬಾತನನ್ನು ನಿನ್ನೆ ತಡ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ಕಳ್ಳರೆಂದು ಸಾಮಾಜಿಕ ಜಾಲ ತಾಣದಲ್ಲಿ ಅನಗತ್ಯವಾಗಿ ಪೋಸ್ಟ್ ವೈರಲ್ ಮಾಡಿದ್ದರಿಂದ ಮುರ್ಕಿ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣ ಮೀರಲು ಕಾರಣವಾಗಿದೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ. ಹಂದಿಕೇರಾ ಗ್ರಾಮದಲ್ಲಿ ಊಟಕ್ಕೆ ಬಂದಿದ್ದ ನಾಲ್ವರನ್ನು ಮಕ್ಕಳ ಕಳ್ಳರೆಂದು ಹೇಳಿ ವಾಟ್ಸ್ ಆಪ್​ನಲ್ಲಿ ಬಿಂಬಿಸಲಾಗಿತ್ತು. ಇದರಿಂದ ಅಪಘಾತಕ್ಕೀಡಾದ ಕಾರಿನ ಸುತ್ತಲೂ ಸಾವಿರಾರು ಜನ ಸೇರಿಕೊಂಡು ಅಪಘಾತದಲ್ಲಿ ಗಾಯಗೊಂಡವರೆಲ್ಲಾ ಮಕ್ಕಳ ಕಳ್ಳರೆಂದು ಆಕ್ರೋಶ ವ್ಯಕ್ತಪಡಿಸಿ ಸ್ಥಳಕ್ಕೆ ಬಂದ ಪೊಲೀಸರು ಸೇರಿದಂತೆ ಕಾರಿನಲ್ಲಿದ್ದವರನ್ನು ಹಿಗ್ಗಾ ಮುಗ್ಗಾ ಥಳಿಸಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಲ್ಲಿ ಹೈದ್ರಾಬಾದ್ ಮೂಲದ ಸಮೀರ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದು, ಪೊಲೀಸರಿಗೂ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಐ.ಜಿ ಮುರುಗನ್ ಭೇಟಿ ನೀಡಿದ್ದು, ಬೀದರ್ ಎಸ್.ಪಿ ದೇವರಾಜ್ ಡಿ, ಅಡಿಷನಲ್ ಎಸ್.ಪಿ ಶ್ರೀಹರಿ ಬಾಬು ಸೇರಿದಂತೆ ಪೊಲೀಸರು ಗ್ರಾಮದಲ್ಲಿ ಬಿಡಾರ ಹೂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಪೋಸ್ಟ್​ ಮಾಡುವ ಮೂಲಕ ಸಾರ್ವಜನಿಕ ಶಾಂತಿ ಭಂಗ ಮಾಡುವ ಎಲ್ಲಾ ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ಬಳಕೆದಾರರ ಮೇಲೆ ನೀಗಾ ವಹಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೀದರ್ ಎಸ್.ಪಿ. ದೇವರಾಜ್ ಎಚ್ಚರಿಕೆ ನೀಡಿದ್ದಾರೆ. ಹಿಂದೂಸ್ತಾನ್ ಸಮಾಚಾರ/ಎಂ.ಎಸ್/ ಯ.ಮ
image