Hindusthan Samachar
Banner 2 बुधवार, फरवरी 20, 2019 | समय 04:10 Hrs(IST) Sonali Sonali Sonali Singh Bisht

ಲೋಕಸಭಾ ಚುನಾವಣೆಗೂ ಮುಂಚೆಯೇ ರಾಮಮಂದಿರ ಕಾಮಗಾರಿ ಆರಂಭ - ಅಮಿತ್ ಶಾ

By HindusthanSamachar | Publish Date: Jul 14 2018 12:21PM
ಲೋಕಸಭಾ ಚುನಾವಣೆಗೂ ಮುಂಚೆಯೇ ರಾಮಮಂದಿರ ಕಾಮಗಾರಿ ಆರಂಭ - ಅಮಿತ್ ಶಾ
ಅಹಮದಾಬಾದ್, ಜು.14 - 2019ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿಯೇ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಡ ಕಾಮಗಾರಿ ಆರಂಭಿಸುವುದಾಗಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ರಾಮ ಮಂದಿರ ಕಾಮಗಾರಿಯ ಆರಂಭಕ್ಕೆ ಇರುವ ಅಡತಡೆಗಳನ್ನು ನಿವಾರಿಸಿ ಸಾರ್ವತ್ರಿಕ ಚುನಾವಣೆಗೂ ಮುಂಚಿತವಾಗಿಯೇ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಅಮಿತ್ ಶಾ ಹೇಳಿಕೆ ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಾಕಾರಿ ಸದಸ್ಯ ಪೆರ್ಲಾ ಶೇಕರ್ ಜಿ, ಲೋಕಸಭಾ ಚುನಾವಣೆಗೂ ಮೊದಲೇ ರಾಮ ಮಂದಿರ ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ಹೇಳಿದ್ದಾರೆ. ಹೈದರಾಬಾದ್ ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ ಅಮಿತ್ ಶಾ, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವಂತೆ ತಿಳಿಸಿದ್ದಾರೆ . ಹಿಂದೂಸ್ತಾನ್ ಸಮಾಚಾರ/ಎಂ.ಎಸ್/ ಯ.ಮ
लोकप्रिय खबरें
चुनाव 2018
image