Hindusthan Samachar
Banner 2 सोमवार, फरवरी 18, 2019 | समय 12:22 Hrs(IST) Sonali Sonali Sonali Singh Bisht

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಗನನ್ನೇ ಸುಫಾರಿ ನೀಡಿ ಹತ್ಯೆ ಮಾಡಿಸಿದ ತಾಯಿ

By HindusthanSamachar | Publish Date: Jul 14 2018 11:09AM
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಗನನ್ನೇ ಸುಫಾರಿ ನೀಡಿ ಹತ್ಯೆ ಮಾಡಿಸಿದ ತಾಯಿ
ನವದೆಹಲಿ, ಜು.14 (ಹಿತಾಯಿಯೇ ಸುಪಾರಿ ನೀಡಿ ಮಗನನ್ನು ಕೊಲೆ ಮಾಡಿಸಿದ ಭಯಾನಕ ಘಟನೆಯೊಂದು ಗ್ರೇಟರ್​ ನೋಯ್ಡಾದ ದಾದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಲುಹರಾಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೃತನನ್ನು ಲುಹರಾಳಿ ಗ್ರಾಮದ ಅನ್ಸುಲ್ ಎಂದು ಗುರುತಿಸಲಾಗಿದೆ. ಜೂನ್ 18 ರಂದು ಕೋಟ್ ಗ್ರಾಮದ ಸೇತುವೆ ಬಳಿ ಅನ್ಸುಲ್​ನ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ದಾದ್ರಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಕೊಲೆಯಾದ ವ್ಯಕ್ತಿಯ ತಾಯಿಯೂ ಸೇರಿದಂತೆ ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ವರದಿಯ ಪ್ರಕಾರ, ಕೊಲೆಯಾದ ಅನ್ಸುಲ್ ತಾಯಿ ಅದೇ ಗ್ರಾಮದಲ್ಲಿರುವ ದೇವಾಲಯದ ಪೂಜಾರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಚಾರ ಇಡೀ ಗ್ರಾಮಕ್ಕೆ ತಿಳಿದಿತ್ತು ಎನ್ನಲಾಗಿದೆ. ನಂತರದ ದಿನಗಳಲ್ಲಿ ಕೆಲವು ಗ್ರಾಮಸ್ಥರಿಂದ ತಾಯಿಯ ಅನೈತಿಕ ಸಂಬಂಧದ ಸುದ್ದಿ ಮಗನಿಗೆ ತಿಳಿದುಬಂದಿದ್ದು, ಅನ್ಸುಲ್ ತನ್ನ ತಾಯಿಯ ವಿರುದ್ಧ ಈ ವಿಚಾರವಾಗಿ ಧ್ವನಿ ಎತ್ತಿದ್ದಾನೆ. ಮಗ ಈ ರೀತಿ ಪ್ರಶ್ನಿಸಿದ್ದನ್ನು ಸಹಿಸದ ತಾಯಿ, ತನ್ನ ಅಳಿಯ, ಪೂಜಾರಿ ಹಾಗು ಇಬ್ಬರು ಸಹಚರರ ಜೊತೆ ಸೇರಿ 35 ಸಾವಿರ ರೂ. ನೀಡುವ ಮೂಲಕ ಅನ್ಸುಲ್ ಕೊಲೆಗೆ ಸುಪಾರಿ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದೂಸ್ತಾನ್ ಸಮಾಚಾರ/ಎಂ.ಎಸ್/ ಯ.ಮ
लोकप्रिय खबरें
चुनाव 2018
image