Hindusthan Samachar
Banner 2 रविवार, नवम्बर 18, 2018 | समय 14:21 Hrs(IST) Sonali Sonali Sonali Singh Bisht

ಜುಲೈ 27 - 28 ರಂದು ಖಗ್ರಾಸ ಚಂದ್ರಗ್ರಹಣ ಗೋಚರ

By HindusthanSamachar | Publish Date: Jul 14 2018 11:08AM
ಜುಲೈ 27 - 28 ರಂದು ಖಗ್ರಾಸ ಚಂದ್ರಗ್ರಹಣ ಗೋಚರ
ನವದೆಹಲಿ,ಜು.14 (ಹಿ. ಶತಮಾನದ ಸುದೀರ್ಘ ಅವಧಿಯ ಸಂಪೂರ್ಣ ಚಂದ್ರಗ್ರಹಣ ಇದೇ ತಿಂಗಳ 27-28ರಂದು ನಡೆಯಲಿದೆ ಎಂದು ಭೂವಿಜ್ಞಾನ ಸಚಿವಾಲಯವು ಮಾಹಿತಿ ಪ್ರಕಟಿಸಿದೆ. ಭಾಗಶಃ ಚಂದ್ರಗ್ರಹಣವು ಜುಲೈ 27ರಂದು ರಾತ್ರಿ 11:54 ರಂದು ಆರಂಭವಾಗಿ, ಚಂದ್ರ ಕ್ರಮೇಣ ಭೂಮಿಯ ಕೊಡೆಯ ಮಾದರಿ ನೆರಳಿನಿಂದ ಆವೃತ್ತವಾಗಲಿದೆ. ಜುಲೈ 28ರಂದು ಬೆಳಗ್ಗೆ 1 ಗಂಟೆಗೆ ಸಂಪೂರ್ಣ ಗ್ರಹಣ ಗೋಚರಿಸಲಿದೆ. ಗ್ರಹಣವು ಒಟ್ಟು 2:43 ಗಂಟೆಗಳ ಕಾಲ ಇರಲಿದ್ದು, ಬೆಳಗ್ಗೆ 3:49ಕ್ಕೆ ಚಂದ್ರನು ಭೂಮಿಯ ಛಾಯೆಯಿಂದ ನಿಧಾನವಾಗಿ ಮುಕ್ತಿ ಪಡೆಯಲಿದ್ದಾನೆ. ಗ್ರಹಣ ವೇಳೆ ಭೂಮಿ ನೆರಳಿನ ಕೇಂದ್ರ ಭಾಗದಿಂದ ಚಂದ್ರ ಹಾದು ಹೋಗಲಿದೆ. ನಂತರ ಭೂಮಿಯಿಂದ ಬಹುದೂರ ಕ್ರಮಿಸಿ, ತನ್ನ ಕಕ್ಷೆಯಲ್ಲಿ ನಿಧಾನಗತಿಯಲ್ಲಿ ಸುತ್ತಲಿದೆ. ಇದರಿಂದ ಗ್ರಹಣದಿಂದ ಮುಕ್ತವಾಗಲು ಸಾಕಷ್ಟು ಸಮಯ ಹಿಡಿಯಲಿದೆ ಎನ್ನಲಾಗಿದೆ. ಈ ಹಿಂದೆ 2000 ಜುಲೈ 16 ರಂದು 1 ಗಂಟೆ 46 ನಿಮಿಷ ಹಾಗೂ 2011 ಜೂನ್​ 15 ರಂದು 1 ಗಂಟೆ 40 ನಿಮಿಷಗಳ ಕಾಲ ಸಂಪೂರ್ಣ ಚಂದ್ರಗ್ರಹಣ ಸಂಭವಿಸಿತ್ತು ಎಂದು ಭೂವಿಜ್ಞಾನ ಸಚಿವಾಲಯವು ಹೇಳಿದೆ. ಗ್ರಹಣವು ಭಾರತದಲ್ಲಿಯೂ ಕಾಣಿಸಲಿದ್ದು, ಆಸ್ಟ್ರೇಲಿಯಾ, ಏಷಿಯಾ, ರಷ್ಯಾದ ಭಾಗಗಳಲ್ಲಿ ಗೋಚರಿಸಲಿದೆ. ಅಲ್ಲದೆ ಆಫ್ರಿಕಾ, ಯುರೋಪ್​ , ಸೌತ್​ ಅಮೆರಿಕಾದ ಪೂರ್ವ ಭಾಗ ಮತ್ತು ಅಂಟಾರ್ಟಿಕಾಗಳಲ್ಲಿಯೂ ಗೋಚರಿಸಬಹುದು ಎನ್ನಲಾಗಿದೆ. ಜುಲೈ 27ರಂದು ಮಂಗಳ ಗ್ರಹವು ಸೂರ್ಯನಿಗೆ ಎದುರಾಗಲಿದ್ದು, ಇವೆರಡೆರ ಮಧ್ಯೆ ಭೂಮಿ ಇರಲಿದೆ. ಇದರಿಂದ ಮಂಗಳನು ಭೂಮಿಯ ಸನಿಹಕ್ಕೆ ಬರಲಿದ್ದು, ಪರಿಣಾಮ ಮಂಗಳ ಹೆಚ್ಚು ಪ್ರಕಾಶಮಾನವಾಗಿ ಗೋಚರಿಸಲಿದೆ. ಈ ದೃಶ್ಯವು ಜುಲೈ ಮಾಸಾಂತ್ಯದ ಸಂಜೆಯಿಂದ ಬೆಳಗಿನವರೆಗೆ ಗೋಚರಿಸಲಿದೆ . ಗ್ರಹಣದ ವೇಳೆ ಚಂದ್ರನ ಸನಿಹ ಬರುವ ಮಂಗಳನು ಬರಿಗಣ್ಣಿಗೆ ಕಾಣುವನು. ಜುಲೈ 31ಕ್ಕೆ ಭೂಮಿಯ ಅತಿ ಸಮೀಪದಲ್ಲಿ ಸಾಗುವನು ಎಂದು ಹೇಳಲಾಗಿದೆ. 60,000 ವರ್ಷಗಳ ನಂತರ 2003 ಆಗಸ್ಟ್​ನಲ್ಲಿ ನಡೆದಿದ್ದ ಈ ಘಟನೆ ಈ ತಿಂಗಳು ಮತ್ತೆ ಜರುಗಲಿದೆ. ಹಿಂದೂಸ್ತಾನ್ ಸಮಾಚಾರ/ಎಂ.ಎಸ್/ ಯ.ಮ
image