Hindusthan Samachar
Banner 2 बुधवार, फरवरी 20, 2019 | समय 04:11 Hrs(IST) Sonali Sonali Sonali Singh Bisht

ಯುವತಿ ಮೇಲೆ ಅತ್ಯಾಚಾರ ಎಸಗಿ, ಅ್ಯಸಿಡ್ ದಾಳಿ ನಡೆಸಿ ಕೊಲೆ

By HindusthanSamachar | Publish Date: Jul 14 2018 11:08AM
ಯುವತಿ ಮೇಲೆ ಅತ್ಯಾಚಾರ ಎಸಗಿ, ಅ್ಯಸಿಡ್ ದಾಳಿ ನಡೆಸಿ ಕೊಲೆ
ಕೋಲ್ಕತ್ತಾ, ಜು.14 ( ಯುವತಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯ ಮೇಲೆ ಆ್ಯಸಿಡ್ ಎರಚಿ ಕೊಲೆಗೈದಿರುವ ಹೇಯ ಕೃತ್ಯ ಪಶ್ಚಿಮ ಬಂಗಾಳದ ಬಿರಭುಮ್ ಜಿಲ್ಲೆಯಲ್ಲಿ ನಡೆದಿದೆ. ಯುವತಿಯ ಪಕ್ಕದ ಮನೆಯಲ್ಲಿ ವಾಸವಿರುವ ಇಬ್ಬರು ಈ ಕೃತ್ಯ ಎಗಿದ್ದಾರೆ ಎನ್ನಲಾಗಿದ್ದು, ಸಂತ್ರಸ್ತೆಯ ಪೋಷಕರು ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಮಂಜು ಲೆಥ್ ಹಾಗೂ ಚೋತೊನ್ ಲೆಥ್ ಬಂಧಿಸಲ್ಪಟ್ಟ ಆರೋಪಿಗಳು. ನಮ್ಮ ಹೊಸ ಮನೆಯ ವಾಶ್​ ರೂಂಗೆ ಸ್ನಾನಕ್ಕೆಂದು ಯುವತಿ ತೆರಳಿದ್ದಳು. ಬಳಿಕ ತುಂಬಾ ಹೊತ್ತಿನವರೆಗೆ ಆಕೆ ಬರದಿದ್ದಾಗ ಕುಟುಂಬಸ್ಥರು ಆತಂಕಗೊಂಡು ಹುಡುಕ ತೊಡಗಿದ್ದರು. ಆಗ ಆಕೆ ಪ್ಲೋರ್ ಮೇಲೆ ಬಿದ್ದಿದ್ದಳು. ಆಕೆಯ ಬಳಿ ಆ್ಯಸಿಡ್ ಬಾಟಲ್ ಕೂಡ ಬಿದ್ದಿತ್ತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ಯುವತಿಯ ಮರಣೋತ್ತರ ಪರೀಕ್ಷಾ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಹಿಂದೂಸ್ತಾನ್ ಸಮಾಚಾರ/ಎಂ.ಎಸ್/ ಯ.ಮ
लोकप्रिय खबरें
चुनाव 2018
image