Hindusthan Samachar
Banner 2 सोमवार, फरवरी 18, 2019 | समय 11:39 Hrs(IST) Sonali Sonali Sonali Singh Bisht

ಕೆಎಸ್ಆರ್ಟಿಸಿ ಬಸ್ ಪಲ್ಟಿ, ಇಬ್ಬರು ಸಾವು, ನಾಲ್ವರಿಗೆ ಗಾಯ

By HindusthanSamachar | Publish Date: Jul 14 2018 10:08AM
ಕೆಎಸ್ಆರ್ಟಿಸಿ ಬಸ್ ಪಲ್ಟಿ, ಇಬ್ಬರು ಸಾವು, ನಾಲ್ವರಿಗೆ ಗಾಯ
ಬೆಳಗಾವಿ, ಜು.14 (ಹಿಎಸ್ಆರ್​ಟಿಸಿ ಬಸ್ಸೊಂದು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿ ತಾಲೂಕಿನ ಬಡೇಕೊಳ್ಳಮಠದ ಸಮೀಪ ಬಸ್​ ಈ ಘಟನೆ ಸಂಭವಿಸಿದೆ. ಬೆಳಗಾವಿಯಿಂದ ಉಡುಪಿಗೆ ಹೊರಟಿದ್ದ ಬಸ್​ನಲ್ಲಿ 18 ಜನ ಪ್ರಯಾಣಿಸುತ್ತಿದ್ದರು. ಈ ದುರ್ಘಟನೆಯಲ್ಲಿ ಬಸ್ ಚಾಲಕ ಉಡುಪಿಯ ಶಿವಾನಂದ ಲಂಕೆನ್ನವರ ಹಾಗು ಕಿತ್ತೂರು ತಾಲೂಕಿನ ನಿಚ್ಛನಿಕೆ ಗ್ರಾಮದ ಅಶೋಕ ದುಂಡಿ‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಹೆದ್ದಾರಿ ಮೇಲೆ ಕೆಲಹೊತ್ತು ಸಂಚಾರ‌ ಸ್ಥಗಿತಗೊಂಡಿತ್ತು. ಜೆಸಿಬಿ ಸಹಾಯದಿಂದ ಹೆದ್ದಾರಿ‌ ಮೇಲೆ ಬಿದ್ದಿದ್ದ ಬಸ್ ಪಕ್ಕಕ್ಕೆ ಸರಿಸಿದ ಮೇಲೆ ಸಂಚಾರ ಸರಿದೂಗಿತು. ಕಳೆದೊಂದು ವಾರದಿಂದ ತಾಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಬಸ್ ಮಗುಚಿ ಬೀಳಲು‌ ಮಳೆ‌ಯೇ ಕಾರಣ ಎನ್ನಲಾಗುತ್ತಿದೆ. ಉಡುಪಿ ಡಿಪೋದ ಬಸ್ ಇದಾಗಿದ್ದು, ಘಟನೆಯಲ್ಲಿ ಬಸ್​ನ ಮುಂದಿನ ಎರಡೂ ಗಾಜು ಪುಡಿ ಪುಡಿ ಆಗಿವೆ. ಮುಂದಿನ ಭಾಗ ನುಜ್ಜಾಗಿದೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೂಸ್ತಾನ್ ಸಮಾಚಾರ.ಎಂ.ಎಸ್. ಯ.ಮ
लोकप्रिय खबरें
चुनाव 2018
image